Thursday, 12th December 2024

ಅಜಾತ ಶತ್ರು 96ನೇ ಜನ್ಮ ದಿನಾಚರಣೆ: ‘ಅಟಲ್ ಬಿಹಾರಿ ವಾಜಪೇಯಿ’ ಪುಸ್ತಕ ಬಿಡುಗಡೆ ಇಂದು

ನವದೆಹಲಿ : ಅಜಾತ ಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ‘ಅಟಲ್ ಬಿಹಾರಿ ವಾಜಪೇಯಿ’ ಎಂಬ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ವಾಜಪೇಯಿ ಅವರ ರಾಜಕೀಯ ಚಿಂತನೆಗಳು, ಸಾಧನೆಗಳ ಜೊತೆಗೆ ಅವರ ಜೀವನ ಮತ್ತು ಸಂಸತ್ತಿನಲ್ಲಿ ಅವರು ಮಾಡಿರುವ ಗಮನಾರ್ಹ ಭಾಷಣಗಳನ್ನು ಒಳಗೊಂಡಿದೆ. ಶಕ್ತಿ ಸಿನ್ಹಾ ಅವರು ಪುಸ್ತಕ ಬರೆದಿದ್ದಾರೆ. 300 ಪುಟಗಳ ಈ ಪುಸ್ತಕವನ್ನು ಪೆಂಗ್ವಿನ್​ ಸಂಸ್ಥೆ ಪ್ರಕಟಿಸಿದೆ.

ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ, ಸಂಸತ್​ನಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. 1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ಅವರು ಆಗಸ್ಟ್ 16, 2018ರಂದು ಕೊನೆಯುಸಿರೆಳೆದರು.