Thursday, 21st November 2024

ABC Juice Benefits: ಏನಿದು ಎಬಿಸಿ ಜ್ಯೂಸ್‌? ಇದನ್ನು ಕುಡಿಯುವುದರಿಂದಾಗುವ ಪ್ರಯೋಜನವೇನು?

ABC Juice Benefits

ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್‍ ಅನ್ನು ಬೆರೆಸಿ ತಯಾರಿಸುವ ಜ್ಯೂಸ್‍ಗೆ ಎಬಿಸಿ ಜ್ಯೂಸ್ ಎಂದು ಕರೆಯುತ್ತಾರೆ.  ಇದು ಅನೇಕ ಪೋಷಕಾಂಶಗಳನ್ನು ಒಳಗೊಂಡ ಕಾರಣ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎನ್ನಲಾಗಿದೆ.  ಸೇಬು ಹಣ್ಣು ಜೀವಸತ್ವಗಳು ಮತ್ತು ನಾರಿನಂಶದಿಂದ ಸಮೃದ್ಧವಾಗಿವೆ. ಬೀಟ್ರೂಟ್‍ಗಳು ಅಗತ್ಯ ನೈಟ್ರೇಟ್‍ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಹೊಂದಿವೆ. ಹಾಗೇ ಕ್ಯಾರೆಟ್‍ಗಳು ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎಯನ್ನು ಹೊಂದಿದೆ. ಹಾಗಾದ್ರೆ ಈ ಎಬಿಸಿ ಜ್ಯೂಸ್ (ABC Juice Benefits )ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ ಎಂಬುದನ್ನು ತಿಳಿಯಿರಿ.

ಎಬಿಸಿ ಜ್ಯೂಸ್‍ನ ಪ್ರಯೋಜನಗಳು

ಪೋಷಕಾಂಶ ಭರಿತ
ಎಬಿಸಿ ಜ್ಯೂಸ್‍ ಕ್ಯಾರೆಟ್‍ನಿಂದ ವಿಟಮಿನ್ ಎ, ಸೇಬುಗಳಿಂದ ವಿಟಮಿನ್ ಎ, ಸಿ ಮತ್ತು ಪೊಟ್ಯಾಸಿಯಮ್ ಮತ್ತು ಬೀಟ್ರೂಟ್‍ಗಳಿಂದ ಫೋಲೇಟ್ ಸೇರಿದಂತೆ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ. ಇದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಎಬಿಸಿ ಜ್ಯೂಸ್‍ನಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಮಿಶ್ರಣವಾಗಿದ್ದು, ಇದು ಆ್ಯಂಟಿ ಆಕ್ಸಿಡೆಂಟ್‍ಗಳು  ಮತ್ತು ಪೋಷಕಾಂಶಗಳನ್ನು ಹೊಂದಿರುತ್ತವೆ. ಹಾಗಾಗಿ  ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ದೇಹವು ಕಾಯಿಲೆ ಬೀಳುವುದನ್ನು ತಡೆಯುತ್ತದೆ.

ABC Juice Benefits

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬೀಟ್ರೂಟ್‍ಗಳು ನೈಟ್ರೇಟ್‍ಗಳನ್ನು ಹೊಂದಿರುತ್ತವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ  ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಸೇಬುಗಳಲ್ಲಿರುವ ಫೈಬರ್ ಮತ್ತು ಬೀಟ್ರೂಟ್‍ನಲ್ಲಿರುವ ಜೀರ್ಣಕಾರಿ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಆರೋಗ್ಯವಾಗಿರಿಸುತ್ತದೆ. ಇದು ನಿಯಮಿತ ಕರುಳಿನ ಚಲನೆ ಮತ್ತು ಒಟ್ಟಾರೆ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ದೇಹವನ್ನು ಡಿಟಾಕ್ಸ್ ಮಾಡುತ್ತದೆ
ಬೀಟ್ರೂಟ್‍ಗಳ ನೈಸರ್ಗಿಕ ಗುಣಲಕ್ಷಣಗಳು ಮತ್ತು ಕ್ಯಾರೆಟ್ ಮತ್ತು ಸೇಬುನಲ್ಲಿರುವ ಗುಣಗಳು ಜಲಸಂಚಯನವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿರುವ ವಿಷವನ್ನು ಹೊರಹಾಕುವ ಮೂಲಕ ದೇಹವನ್ನು ಡಿಟಾಕ್ಸ್ ಮಾಡುತ್ತದೆ.

ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ
ಎಬಿಸಿ ಜ್ಯೂಸ್‌ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‍ಗಳು ಮತ್ತು ಜೀವಸತ್ವಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಯಂಗ್ ಆಗಿ ಕಾಣುತ್ತೀರಿ.

ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ
ಕ್ಯಾರೆಟ್ ಹೆಚ್ಚಿನ ಬೀಟಾ-ಕ್ಯಾರೋಟಿನ್ ಅಂಶವನ್ನು ಹೊಂದಿದೆ. ಇದು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಎಬಿಸಿ ಜ್ಯೂಸ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು  ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ
ಎಬಿಸಿ ಜ್ಯೂಸ್‍ನಲ್ಲಿರುವ ಪೋಷಕಾಂಶಗಳು ಮೆದುಳಿನ ಕಾರ್ಯದ  ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.  ಬೀಟ್ರೂಟ್‍ನಲ್ಲಿ ನೈಟ್ರೇಟ್‍ಗಳಿದ್ದು, ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ನೀಳವಾದ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಹೂವುಗಳನ್ನು ಬಳಸಿ ನೋಡಿ!

ಎಬಿಸಿ ಜ್ಯೂಸ್ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅತಿಯಾದ ಸೇವನೆಯು ಕೆಲವು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಕೆಲವು ಜನರು ಗ್ಯಾಸ್ ಮತ್ತು ಉಬ್ಬರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸಬಹುದು. ಹಾಗಾಗಿ ಇದನ್ನು ಮಿತವಾಗಿ ಸೇವಿಸಿ.