ಲಖನೌ: ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ಗಳು ಎಷ್ಟು ಜನರನ್ನು ಸೆಳೆಯುತ್ತದೋ ಅದಕ್ಕಿಂತ ಹೆಚ್ಚು ಟ್ರೋಲ್ಗಳು ಜನರನ್ನು ರಂಜಿಸುತ್ತವೆ. ಕೆಲವೊಮ್ಮೆ ಈ ಟ್ರೋಲರ್ಸ್ನ ತಮ್ಮ ಟ್ರೋಲ್ಗಾಗಿ ಕಾನೂನು ಸಂಕಷ್ಟ ಎದುರಿಸುವಂತಹ ವಿಚಾರಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ 10 ವರ್ಷದ ಆಧ್ಯಾತ್ಮಿಕ ಚಿಂತಕನನ್ನು(Abhinav Arora) ಟ್ರೋಲ್ ಮಾಡಿದ್ದಕ್ಕಾಗಿ ಆತನ ತಾಯಿ ಕೋರ್ಟ್(Mathura court) ಮೆಟ್ಟಿಲೇರಿದ್ದು, ಏಳು ಜನ ಯೂಟ್ಯೂಬರ್ಸ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.
ಮಥುರಾ ಕೋರ್ಟ್ ಮೆಟ್ಟಿಲೇರಿರುವ ಅಭಿನವ್ ಅರೋರಾ ಅವರ ತಾಯಿ ಜ್ಯೋತಿ ತಮ್ಮ ಮಗುವಿನ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಆರೋಪಿಸಿ ಏಳು ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಭಿನವ್ ಅರೋರಾ ಅವರ ಕುಟುಂಬ, ಅವರ ಫಾಲೋವರ್ಸ್ ಅವರನ್ನು ಪ್ರೀತಿಯಿಂದ ‘ಬಾಲ್ ಸಂತ ಬಾಬಾ’ ಎಂದು ಕರೆಯುತ್ತಾರೆ, ಏಳು “ಹಿಂದೂ ವಿರೋಧಿ” ಯೂಟ್ಯೂಬರ್ಗಳು ಅಭಿನವ್ ಅವರನ್ನು ಅಪಹಾಸ್ಯ ಮಾಡಿ ಅಪಮಾನಿಸಿದ್ದಾರೆ.
“ಆಪಾದಿತ ವ್ಯಕ್ತಿಗಳು ತಮ್ಮ ಅಪ್ರಾಪ್ತ ಮಗುವಿಗೆ ಅಪಾರವಾದ ಭಾವನಾತ್ಮಕ ನೋವನ್ನು ಉಂಟುಮಾಡಿದೆ, ಮಗುವಿಗೆ ಕೇವಲ 10 ವರ್ಷ ವಯಸ್ಸಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿರುವ ಟ್ರೋಲ್ಗಳು ಆತನ ಮನಸ್ಸಿನ ಮೇಲೆ ಭಾರೀ ಘಾಸಿಯನ್ನುಂಟು ಮಾಡಿದೆ. ಅಲ್ಲದೇ ತನ್ನ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಇದು ತಡೆಯಾಗಿದೆ ಎಂದು ಅಭಿನವ್ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಅಭಿನವ್ ಅರೋರಾ ಅವರು ಧಾರ್ಮಿಕ ಆಧ್ಯಾತ್ಮಿಕತೆಗೆ ಸಂಬಂಧಿಸಿದ ಕಂಟೆಂಟ್ಗಳ ಮೂಲಕ ಜನಪ್ರಿಯತೆಯನ್ನು ಗಳಿಸಿದರು. Instagram ನಲ್ಲಿ 9.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ, ಅವರು ಹಿಂದೂ ಹಬ್ಬಗಳ ಆಚರಣೆ, ಧರ್ಮಗ್ರಂಥಗಳ ಪಠಣ ಮತ್ತು ಪೂಜ್ಯ ಧಾರ್ಮಿಕ ವ್ಯಕ್ತಿಗಳೊಂದಿಗೆ ಸಂವಾದಗಳನ್ನು ಪ್ರದರ್ಶಿಸುವ ಆಕರ್ಷಕ ವಿಷಯವನ್ನು ಹಂಚಿಕೊಳ್ಳುತ್ತಾರೆ. ಈ ಬಾಲಕನ ಅನೇಕ ವೀಡಿಯೊಗಳು ಹಲವಾರು ವಾರಗಳಲ್ಲಿ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ಜನರು ಅವನ ಸತ್ಯಾಸತ್ಯತೆ ಮತ್ತು ಆಧ್ಯಾತ್ಮಿಕ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ.
ಬಿಷ್ಣೋಯ್ ಗ್ಯಾಂಗ್ನಿಂದಲೂ ಬೆದರಿಕೆ
ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಅವರ ತಂಡದಿಂದ ಅಭಿನವ್ ಅರೋರಾ ಅವರಿಗೆ ಕೊಲೆ ಬೆದರಿಕೆ ಇದೆ ಎಂದು ಅವರ ಕುಟುಂಬ ಸೋಮವಾರ ಹೇಳಿಕೊಂಡಿದೆ. ಎಎನ್ಐ ಜೊತೆ ಮಾತನಾಡಿದ ಅಭಿನವ್ನ ತಾಯಿ ಜ್ಯೋತಿ ಅರೋರಾ, ತನ್ನ ಮಗ ಭಕ್ತಿಯನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗೆ, ಅರೋರಾ ಅವರನ್ನು ಸ್ವಾಮಿ ರಾಮಭದ್ರಾಚಾರ್ಯರು ನಿಂದಿಸಿದ ವೈರಲ್ ವೀಡಿಯೊ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ: Karni Sena: ಲಾರೆನ್ಸ್ ಬಿಷ್ಣೋಯ್ನನ್ನು ಯಾರೇ ಹತ್ಯೆ ಮಾಡಿದ್ರೂ 1,11,11,111 ರೂ. ಬಹುಮಾನ ಗ್ಯಾರಂಟಿ!