Wednesday, 11th December 2024

ಮುಂಬೈ ಸರಣಿ ಸ್ಫೋಟ ಪ್ರಕರಣ: ಅಬು ಬಕರ್ ಬಂಧನ

ನವದೆಹಲಿ: ಮುಂಬೈ ಸರಣಿ ಸ್ಫೋಟ(1993ರ) ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಅಬು ಬಕರ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಬಂಧಿಸಲಾಗಿದೆ.

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬರಾದ ಅಬು ಬಕರ್‌ನ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

1993 ರ ಸ್ಫೋಟದ ಪ್ರಮುಖ ಸಂಚುಕೋರರಲ್ಲಿ ಒಬ್ಬರಾದ ಬಕರ್ ಯುಎಇ ಮತ್ತು ಪಾಕಿಸ್ತಾನದಲ್ಲಿ ನೆಲೆಸಿದ್ದನು. 1997ರಲ್ಲಿ ಆರೋಪಿ ವಿರುದ್ಧ ‘ರೆಡ್ ಕಾರ್ನರ್ ನೋಟಿಸ್’ ಹೊರಡಿಸಲಾಗಿತ್ತು.

ದಾವೂದ್ ಇಬ್ರಾಹಿಂನ ಪ್ರಮುಖ ಲೆಫ್ಟಿನೆಂಟ್‌ಗಳಾದ ಮೊಹಮ್ಮದ್ ಮತ್ತು ಮುಸ್ತಫಾ ದೊಸ್ಸಾ ಜೊತೆಗೆ ಗಲ್ಫ್ ದೇಶಗಳಿಂದ ಮುಂಬೈಗೆ ಚಿನ್ನ, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ಕಳ್ಳಸಾಗಣೆಯಲ್ಲಿ ಅಬು ಬಕರ್ ತೊಡಗಿಸಿಕೊಂಡಿದ್ದನು.

1993ರಲ್ಲಿ ಮುಂಬೈನ 12ಕ್ಕೂ ಅಧಿಕ ಕಡೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಮೃತಪಟ್ಟು 1400 ಮಂದಿ ಗಾಯಗೊಂಡಿದ್ದರು.