Thursday, 12th December 2024

‘ಆಕ್ಸೆಂಚರ್’ ಕಂಪನಿಯಿಂದ 19 ಸಾವಿರ ಉದ್ಯೋಗಿಗಳ ವಜಾ…!

ವದೆಹಲಿ: 19 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಸಾಫ್ಟ್‌ವೇರ್‌ ಕಂಪನಿ ‘ಆಕ್ಸೆಂಚರ್’ ಹೇಳಿದೆ.

ವಾರ್ಷಿಕ ಆದಾಯ ಮತ್ತು ಲಾಭದ ಮುನ್ಸೂಚನೆ ಆಧಾರದ ಮೇಲೆ ಉದ್ಯೋಗಿಗಳನ್ನು ಕಡಿತ ಗೊಳಿಸಲು ಕಂಪನಿ ಮುಂದಾಗಿದೆ. ಆಕ್ಸೆಂಚರ್ ಕಂಪನಿ ವಾರ್ಷಿಕ ಆದಾಯದ ಪ್ರಮಾಣ ಶೇ 8ರಿಂದ ಶೇ 10ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಗೂಗಲ್ ಕಂಪನಿಯು ಒಟ್ಟು 12 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಇತ್ತೀಚೆಗೆ ಘೋಷಿಸಿತ್ತು. ಜಾಗತಿಕವಾಗಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಭೀತಿಯ ನಡುವೆ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವ ತಂತ್ರಜ್ಞಾನ ಕಂಪನಿಗಳ ಸಾಲಿಗೆ ಈಗ ಗೂಗಲ್ ಕೂಡ ಸೇರಿದೆ.

ಫೇಸ್‌ಬುಕ್‌ ಮಾಲೀಕತ್ವದ ಮೆಟಾ ಕಂಪನಿಯು 11 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿತ್ತು. ಟ್ವಿಟರ್ ಕಂಪನಿಯು ಉದ್ಯಮಿ ಇಲಾನ್‌ ಮಸ್ಕ್ ಅವರ ತೆಕ್ಕೆಗೆ ಸೇರಿದ ನಂತರದಲ್ಲಿ ಶೇ.50ರಷ್ಟು ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ.