Saturday, 14th December 2024

ನವಿಲೆ ಸೇತುವೆ ಬಳಿ ಸರಣಿ ಅಪಘಾತ: 48 ವಾಹನಗಳ ಜಖಂ

ಪುಣೆ: ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನವಿಲೆ ಸೇತುವೆ ಬಳಿ ಸರಣಿ ಅಪಘಾತ ಸಂಭವಿಸಿ ಸುಮಾರು 48 ವಾಹನಗಳು ಜಖಂಗೊಂಡು 30 ಮಂದಿ ಗಾಯ ಗೊಂಡಿದ್ದಾರೆ.

ಪುಣೆ ಮಾರ್ಗವಾಗಿ ತೆರಳುತ್ತಿದ್ದ ಟ್ರಕ್‍ ಬ್ರೇಕ್ ವೈಫಲ್ಯದಿಂದ ಈ ಸರಣಿ ಅಪಘಾತ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪುಣೆ ಮೆಟ್ರೊ ಪಾಲಿಟಿನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಕ್ಷಣಾ ತಂಡ ತೆರಳಿ ಕಾರ್ಯಾ ಚರಣೆ ನಡೆಸಿ ವಾಹನಗಳನ್ನು ತೆರವು ಗೊಳಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ 2 ಕಿ.ಮೀಗೂ ಹೆಚ್ಚು ಟ್ರಾಫಿಕ್‍ಜಾಮ್ ಹೆಚ್ಚಾಗಿ ವಾಹನ ಸವಾರರು ಹೈರಾಣಾಗಿದ್ದಾರೆ.

ಟ್ರಕ್ ಬ್ರೇಕ್ ವೈಫಲ್ಯದಿಂದಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ 48ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪಪೊಲೀಸ್ ಆಯುಕ್ತ ಸುಹೇಲ್ ಶರ್ಮ ತಿಳಿಸಿದ್ದಾರೆ.