Saturday, 21st September 2024

Accident News : ಕಾರು ಗುದ್ದಿದ ರಭಸಕ್ಕೆ ಫ್ಲೈಓವರ್‌ ಪಿಲ್ಲರ್ ನಡುವೆ ಸಿಲುಕಿಕೊಂಡ ಮಹಿಳೆ! ಇಲ್ಲಿದೆ ವಿಡಿಯೊ

Accident News

ನವದೆಹಲಿ: ನೋಯ್ಡಾದ ಎಲಿವೇಟೆಡ್ ರಸ್ತೆಯಲ್ಲಿ ಕಾರು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ (Accident News) ಮಹಿಳೆಯೊಬ್ಬರು ಎಗರಿ ಬಿದ್ದು ಫ್ಲೈಓವರ್‌ನ ಪಿಲ್ಲರ್‌ಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಅವರು ಗಾಯದಿಂದ ಪಾರಾಗಿದ್ದಾರೆ. ಆದರೆ, ಕೆಳಗೆ ಬಿದ್ದಿದ್ದರೆ ಅವರು ಕೊನೆಯುಸಿರೆಳೆಯುವ ಎಲ್ಲ ಸಾಧ್ಯತೆಗಳಿದ್ದವು. ಅವರನ್ನು ಪಿಲ್ಲರ್‌ಗಳ ನಡುವಿನಿಂದ ರಕ್ಷಣೆ ಮಾಡುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಪೊಲೀಸರ ಪ್ರಕಾರ ಮಹಿಳೆ ಸ್ಕೂಟರ್ ಮೂಲಕ ಸಾಗುತ್ತಿದ್ದರು. ಸೆಕ್ಟರ್ 18 ರಿಂದ ಸೆಕ್ಟರ್ 62 ಕಡೆಗೆ ಎಲಿವೇಟೆಡ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅವರು ಸ್ಕೂಟರ್‌ನಿಂದ ಕೆಳಕ್ಕೆ ಬಿದ್ದು ಅಲ್ಲಿಂದ ಜಾರಿ ಪಿಲ್ಲರ್‌ ಫ್ಲಾಟ್ ಟಾಪ್ ಕಂಬದ ಮೇಲೆ ಬಿದ್ದಿದ್ದರು. ಸ್ಥಳದಲ್ಲಿದ್ದ ಕೆಲವರು ಅವರನ್ನು ರಕ್ಷಿಸು ಉದ್ದೇಶದಿಂದ ಪಿಲ್ಲರ್‌ನ ನಡುವೆ ಇಳಿದಿದ್ದರು. ಆದರೆ ಅವರಿಗೂ ಮೇಲಕ್ಕೆ ಏರಲು ಸಾಧ್ಯವಾಗದೇ ಅಲ್ಲೇ ಸಿಲುಕಿಕೊಂಡದರು.

ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಯಂತ್ರ ತಂದು ಎಲ್ಲರನ್ನೂ ರಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಂಬದ ಮೇಲೆ ಹತ್ತಿ ಅಗ್ನಿಶಾಮಕ ಹೈಡ್ರಾಲಿಕ್ ಪ್ಲಾಟ್ಫಾರ್ಮ್ ಮೂಲಕ ಅವರನ್ನು ಇಳಿಸಿದ್ದಾರೆ.

ಇದನ್ನೂ ಓದಿ: Rahul Gandhi : ಬಿಜೆಪಿಯ ಸುಳ್ಳು ಮುಂದುವರಿದಿದೆ; ಅಮೆರಿಕದಲ್ಲಿ ಸಿಖ್ ಹೇಳಿಕೆ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿ

ವೈರಲ್‌ ಆಗಿರುವ ವೀಡಿಯೊವೊಂದರಲ್ಲಿ, ಪ್ಲಾಟ್ಫಾರ್ಮ್ ಅನ್ನು ಮೇಲಕ್ಕೆತ್ತುವುದನ್ನು ಮತ್ತು ಮಹಿಳೆಯನ್ನು ಅದರ ಮೂಲಕ ಇಳಿಸುವುದನ್ನು ಕಾಣಬಹುದು. ಅಲ್ಲಿಂದ ಅವರನ್ನು ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಗಿದೆ. ನಂತರ ಕಂಬದ ಮೇಲಿರುವ ಇಬ್ಬರು ಪುರುಷರನ್ನು ಅದೇ ರೀತಿ ಕಾಪಾಡಲಾಗಿದೆ. ಅಧಿಕಾರಿಯೊಬ್ಬರು ಅವರ ಒಬ್ಬರ ಬೆನ್ನನ್ನು ತಟ್ಟುವುದನ್ನು ಕಾಣಬಹುದು.

ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೋಯ್ಡಾ) ಮನೀಶ್ ಮಿಶ್ರಾ ಮಾತನಾಡಿ, ಮಹಿಳೆ ಕಂಬದ ಮೇಲೆ ಬಿದ್ದಿದ್ದರು. ಅವರನ್ನು ರಕ್ಷಿಸಲು ಪ್ರಯತ್ನಿಸಿದ ಇಬ್ಬರು ಪುರುಷರು ಸಹ ಸಿಕ್ಕಿಬಿದ್ದರು. ಪೊಲೀಸರು ಮತ್ತು ಅಗ್ನಿಶಾಮಕ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿ ಮೂವರನ್ನು ರಕ್ಷಿಸಲಾಗಿದೆ. ಮಹಿಳೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ.

ಕಾಮೆಂಟ್ ಪೋಸ್ಟ್ ಮಾಡಿ
ವ್ಯಾಗನ್ ಆರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ. “ನಾವು ಬಾಲಕಿಯ ಹೇಳಿಕೆಯನ್ನು ದಾಖಲಿಸುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದರು.