Thursday, 12th December 2024

ರಸ್ತೆಗೆ ಕೋತಿಗಳ ಲಗ್ಗೆ: ಅಪಘಾತದಲ್ಲಿ 3 ಬ್ಯಾಂಕ್ ಉದ್ಯೋಗಿಗಳ ಸಾವು

road accident news

ಖನೌ: ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 3 ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿ ದ್ದಾರೆ. ಈ ಅಪಘಾತಕ್ಕೆ ಕೋತಿಗಳು ಕಾರಣ ಎಂದು ಹೇಳಲಾಗಿದೆ.

ಕೋತಿಗಳು ರಸ್ತೆಗೆ ಲಗ್ಗೆ ಇಟ್ಟ ಪರಿಣಾಮ ಕಾರು ನಿಯಂತ್ರಣ ತಪ್ಪಿ ಟ್ಯಾಂಕರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಬ್ಯಾಂಕ್‌ ಉದ್ಯೋಗಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೊರದಾಬಾದ್-ಅಲಿಗಢ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಮೊರದಾಬಾದ್‌ ನ ಡೋಮ್‌ ಗಢ್‌ ಪ್ರದೇಶದಲ್ಲಿ ಈ ಅಪಘಾತ ಘಟನೆ ನಡೆದಿತ್ತು. ಮೃತರನ್ನು ಆಕ್ಸಿಸ್‌ ಬ್ಯಾಂಕ್‌ ಮ್ಯಾನೇಜರ್‌ ಸೌರಭ್‌ ಶ್ರೀವಾತ್ಸವ್‌, ಕ್ಯಾಶಿಯರ್‌ ದಿವ್ಯಾಂಶು ಮತು ಹಾಗೂ ಅಮಿತ್‌ ಎಂದು ಗುರುತಿಸಲಾಗಿದೆ.

ಆಕ್ಸಿಸ್‌ ಬ್ಯಾಂಕ್‌ ನ ಮೂವರು ಉದ್ಯೋಗಿಗಳು ತೆರಳುತ್ತಿದ್ದಾಗ ಕಾರು ಟ್ಯಾಂಕರ್‌ ಗೆ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಮಿತ್‌ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಮಂಗಗಳ ಗುಂಪು ದಿಢೀರನೆ ರಸ್ತೆಗೆ ಆಗಮಿಸಿದ್ದ ಪರಿಣಾಮ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.