ನವದೆಹಲಿ: ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್), ಅದಾನಿ ಸಮೂಹ ಸಂಸ್ಥೆಗಳಲ್ಲಿ ಷೇರು ಹೊಂದಿರುವ ಮೂರು ಎಫ್‌ಪಿಐ (ವಿದೇಶಿ ಬಂಡವಾಳ ಹೂಡಿಕೆ) ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ವಿಚಾರ ಬಹಿರಂಗವಾದ ಬೆನ್ನಲ್ಲೇ ಸೋಮವಾರ ‘ಅದಾನಿ ಎಂಟರ್‌ಪ್ರೈಸಸ್’ ಷೇರು ಮೌಲ್ಯವು ಶೇ 25ರಷ್ಟು ಕುಸಿತ ಕಂಡಿದೆ.
ಷೇರುಪೇಟೆಯಲ್ಲಿ ‘ಅದಾನಿ ಎಂಟರ್‌ಪ್ರೈಸಸ್’ ಷೇರು ಮೌಲ್ಯವು ಶೇ 24.99ರಷ್ಟು ಕುಸಿದಿದೆ. ‘ಅದಾನಿ ಪೋರ್ಟ್ಸ್ ಆಯಂಡ್ ಸ್ಪೆಷಲ್ ಎಕಾನಮಿಕ್ ಝೋನ್’ ಷೇರು ಮೌಲ್ಯ ಶೇ 18.75ರಷ್ಟು ಕುಸಿದು ₹681.50 ಆಗಿದೆ.
‘ಅದಾನಿ ಗ್ರೀನ್ ಎನರ್ಜಿ’ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿ ₹1,165.35 ಆಗಿದೆ. ‘ಅದಾನಿ ಟೋಟಲ್ ಗ್ಯಾಸ್’ ಷೇರು ಮೌಲ್ಯ ಶೇ 5ರಷ್ಟು ಕುಸಿದು ₹1,544.55 ಆಗಿದೆ. ‘ಅದಾನಿ ಟ್ರಾನ್ಸ್‌ಮಿಷನ್’ ಷೇರು ಮೌಲ್ಯ ಶೇ 5ರಷ್ಟು ಇಳಿಕೆಯಾಗಿದೆ. ₹1,517.25 ಮತ್ತು ‘ಅದಾನಿ ಪವರ್’ ಷೇರು ಮೌಲ್ಯ ಶೇ 4.99ರಷ್ಟು ಕುಸಿದು ₹140.90 ಆಗಿದೆ.