Thursday, 12th December 2024

ಆದಿತ್ಯ ಠಾಕ್ರೆ ಕಾರಿನ ಮೇಲೆ ಕಲ್ಲು ತೂರಾಟ

ರಂಗಾಬಾದ್: ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ವೈಜಾಪುರದ ಮಹಲ್‌ಗಾಂವ್‌ನಲ್ಲಿ ಆದಿತ್ಯ ಠಾಕ್ರೆ ಶಿವಸಂವಾದ ಯಾತ್ರೆ ಯನ್ನು ನಡೆಸು ತ್ತಿದ್ದು, ಅದೇ ಸಮಯದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದ ಮೆರವಣಿಗೆ ಯೂ ಪ್ರಾರಂಭವಾಯಿತು. ಈ ವೇಳೆ ಕಲ್ಲು ತೂರಾಟ ನಡೆದಿದೆ.

ಮೆರವಣಿಗೆ ನಡೆಸುತ್ತಿದ್ದವರು ಮತ್ತು ಶಿವಸೇನೆ ಬೆಂಗಾವಲು ಪಡೆಯ ನಡುವೆ ಬಿರುಕು ಮೂಡಿಸಲು ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾ ದಾಸ್ ದಾನ್ವೆ ಆರೋಪಿಸಿದ್ದಾರೆ.

ಡಿಜೆ ಮತ್ತು ಮೆರವಣಿಗೆ ನಿಲ್ಲಿಸುವಂತೆ ಪೊಲೀಸರು ಹೇಳಿದಾಗ, ಜನರು ಕೋಪಗೊಂಡು ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ದಾನ್ವೆ ಹೇಳಿದರು.

ಪರಿಸ್ಥಿತಿ ನೋಡಿದ ಆದಿತ್ಯ ಠಾಕ್ರೆ ವೇದಿಕೆಯಿಂದ ಕೆಳಗಿಳಿಯುವ ಮೂಲಕ ಭಾಷಣ ಮಾಡಿದರು.

 
Read E-Paper click here