ನವದೆಹಲಿ : ಅಡ್ವಾನ್ಸ್ಡ್ ಮೆಡಿಕಲ್ ಟೆಕ್ನಾಲಜಿ ಅಸೋಸಿಯೇಷನ್ ಭಾರತದಲ್ಲಿ ಆರೋಗ್ಯ ವೃತ್ತಿಪರರೊಂದಿಗಿನ ಸಂವಹನಗಳ ಕುರಿತು ಅಡ್ವಾಮೆಡ್ ನೀತಿ ಸಂಹಿತೆಯನ್ನು ಪ್ರಾರಂಭಿಸಿದೆ.
ಇದು ವೈದ್ಯಕೀಯ ತಂತ್ರಜ್ಞಾನ ಮತ್ತು ಡಯಾಗ್ನೋಸ್ಟಿಕ್ಸ್ ತಯಾರಕರಿಗೆ ಅನುಸರಣೆ ತತ್ವಗಳು ಮತ್ತು ಮಾರ್ಗದರ್ಶನ ದೊಂದಿಗೆ ವ್ಯಾಪಾರ ಸಂಬAಧಗಳು ಮತ್ತು ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಮುಖ ಕಾನೂನು ಅಪಾಯದ ಕ್ಷೇತ್ರಗಳನ್ನು ತಿಳಿಸುತ್ತದೆ. ಕೋಡ್‌ನ ಮೂಲ ಮೌಲ್ಯಗಳಾದ ನಾವೀನ್ಯತೆ, ಶಿಕ್ಷಣ, ಸಮಗ್ರತೆ, ಗೌರವ, ಜವಾಬ್ದಾರಿ ಮತ್ತು ಪಾರದರ್ಶಕತೆ ಯೊಂದಿಗೆ ಸಮಂಜಸವಾದ ಮತ್ತು ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಂಪನಿಗಳಿಗೆ ಸಹಾಯ ಮಾಡಲು ಕೋಡ್ ಉದ್ದೇಶಿಸಲಾಗಿದೆ.
ಅಡ್ವಾಮೆಡ್ ಕೋಡ್ ಅಂತರವನ್ನು ಕಡಿಮೆ ಮಾಡುವ ಮತ್ತು ತರಬೇತಿ ಮತ್ತು ಕ್ಲಿನಿಕಲ್ ಸಂಶೋಧನೆಗೆ ಸಂಬಂಧಿಸಿದಂತೆ ಮೆಡ್‌ಟೆಕ್ ವಲಯದ ಅನನ್ಯ ಅವಶ್ಯಕತೆ ಗಳ ಮೇಲೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಈ ಕೋಡ್ ಯುಸಿಪಿಎಂಪಿ, ಎಂಸಿಐ ಮಾರ್ಗಸೂಚಿಗಳು, ವೈದ್ಯಕೀಯ ಸಾಧನ ಕಂಪನಿಗಳ ನಿರ್ದಿಷ್ಟ ಅವಶ್ಯಕತೆಗಳ ಜೊತೆಗೆ ಭಾರತ, ಯುಕೆ ಮತ್ತು ಯುಎಸ್‌ಗಳಲ್ಲಿನ ಸ್ಥಳೀಯ ಭ್ರಷ್ಟಾಚಾರ ನಿಗ್ರಹ ಕಾನೂನುಗಳನ್ನು ಪರಿಗಣಿಸಿದೆ.
“ವೈದ್ಯಕೀಯ ಸಾಧನಗಳ ಕಂಪನಿಗಳು, ಜಾಗತಿಕವಾಗಿ ಮತ್ತು ಭಾರತದಲ್ಲಿ ವೈದ್ಯಕೀಯ ವಿಜ್ಞಾನವನ್ನು ಮುನ್ನಡೆಸುವುದು; ಉತ್ತಮ ಗುಣಮಟ್ಟದ, ನವೀನ ವೈದ್ಯಕೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು; ಮತ್ತು ರೋಗಿಗಳ ಆರೈಕೆಯನ್ನು ಸುಧಾರಿಸಲು ಮೀಸಲಾಗಿವೆ. ರೋಗಿಗಳ ಸುರಕ್ಷತೆ ಮತ್ತು ಅವರ ಎಲ್ಲಾ ಕಾರ್ಯಗಳಲ್ಲಿ ಸಮಗ್ರತೆಯನ್ನು ಖಾತ್ರಿಪಡಿಸಿಕೊಂಡು ತಮ್ಮ ವ್ಯವಹಾರದ ಧ್ಯೆಯಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವಾಗ, ಈ ಕೋಡ್ ಎಲ್ಲಾ ಕಂಪನಿಗಳಿಗೆ ಅತ್ಯಗತ್ಯ ಮಾರ್ಗ ದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.
ಸಣ್ಣ, ಮಧ್ಯಮ ಮತ್ತು ಬೃಹತ್ ಸಂಸ್ಥೆಗಳು ಮತ್ತು ಈ ವ್ಯವಹಾರಗಳ ಮುಂಚೂಣಿಯಲ್ಲಿರುವ ಎಲ್ಲಾ ಪ್ರತಿನಿಧಿಗಳು ಸೇರಿದಂತೆ ಎಲ್ಲಾ ಮೆಡ್-ಟೆಕ್ ಕಂಪನಿಗಳು ಕೋಡ್ ಅನ್ನು ಪೂರ್ವಭಾವಿಯಾಗಿ ಅಳವಡಿಸಿಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ. ಈ ಕೋಡ್ ಅವರ ವ್ಯವಹಾರದ ಅವಧಿಯಲ್ಲಿ ಆರೋಗ್ಯ ಸೇವೆಯ ವೃತ್ತಿಗಳೊಂದಿಗೆ ಸಂವಹನಗಳನ್ನು ಪ್ರಮಾಣೀಕರಿಸುವುದಲ್ಲದೆ ಇಡೀ ಉದ್ಯಮದ ಪ್ರಯೋಜನಕ್ಕಾಗಿ ಆರೋಗ್ಯಕರ ಮೆಡ್‌ಟೆಕ್ ಆವಿಷ್ಕಾರಿ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ” ಎಂದು ಅಡ್ವಮೆಡ್‌ನ ಗ್ಲೋಬಲ್ ಸ್ಟಾçಟಜಿ ಮತ್ತು ಅನಾಲಿಸಿಸ್‌ನ ಹಿರಿಯ ಉಪಾಧ್ಯಕ್ಷ ಅಬ್ಬಿ ಪ್ರಾ÷್ಯಟ್ ಹೇಳಿದರು.
ಭಾರತದಲ್ಲಿನ ಮೆಡ್‌ಟೆಕ್ ಉದ್ಯಮದಾದ್ಯಂತ ಹೆಚ್ಚಿನ ಸ್ಥಿರತೆಯನ್ನು ಉತ್ತೇಜಿಸಲು ಅಡ್ವಮೆಡ್ ಇಂಡಿಯಾ ಕಾರ್ಯಕಾರಿ ಸಮಿತಿಯ ಶಿಫಾರಸಿಗೆ ಪ್ರತಿಕ್ರಿಯೆಯಾಗಿ ಅಡ್ವಮೆಡ್ ಇಂಡಿಯಾ ಕೋಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಜೊತೆ ಗೂಡಿಸುತ್ತಾ, ಭಾರತ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ, ಃಆ, ಪವನ್ ಮೊಚೆರ್ಲಾ ಹೇಳಿದರು, “ಅಡ್ವಮೆಡ್ ಇಂಡಿಯಾ ನೀತಿ ಸಂಹಿತೆಯು ಭಾರತದಲ್ಲಿ ವ್ಯಾಪಾರ ನೀತಿಗಳಿಗೆ ಉನ್ನತ ಗುಣಮಟ್ಟವನ್ನು ನಿರ್ಮಿಸುತ್ತದೆ.
ಅಡ್ವಮೆಡ್ ಮತ್ತು ಅದರ ಸದಸ್ಯರು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ದೇಶದಲ್ಲಿ ಮೆಡ್‌ಟೆಕ್ ವಲಯವನ್ನು ಬಲಪಡಿಸಲು ತಮ್ಮ ಪರಿಣತಿ ಮತ್ತು ಜ್ಞಾನವನ್ನು ಉಪಯೋಗಕ್ಕೆ ತರಲು ಬದ್ಧರಾಗಿದ್ದಾರೆ. ವಲಯಕ್ಕೆ ತಮ್ಮದೇ ಆದ ಕೋಡ್ ಅನ್ನು ಅಭಿವೃದ್ಧಿಪಡಿಸಲು ಯೋಚಿಸುತ್ತಿರುವಾಗ ಈ ಕೋಡ್ ಭಾರತ ಸರ್ಕಾರವು ಪರಿಗಣಿಸಲು ಮೌಲ್ಯಯುತ ಉದಾಹರಣೆ ಯಾಗಿದೆ.
ಭಾರತಕ್ಕೆ ಸಂಬಂಧಿಸಿದಂತೆ, ಕೋಡ್ ದೇಶದ ಅನನ್ಯ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ – ವೃತ್ತಿಪರ ಮತ್ತು ಸಾಂಸ್ಕತಿಕ ಮಟ್ಟಗಳೆರಡದಲ್ಲೂ. ಇದು ಕೋಡ್ ಅನ್ನು ಹೆಚ್ಚು ಸ್ಥಳೀಯವಾಗಿ ಮತ್ತು ಕಾರ್ಯಗತಗೊಳಿಸಲಾಗುವಂತೆ ಮಾಡುತ್ತದೆ. ಭಾರತದಲ್ಲಿ ವ್ಯಾಪಾರ ಮಾಡುವ ಎಲ್ಲಾ ವೈದ್ಯಕೀಯ ತಂತ್ರಜ್ಞಾನ ಕಂಪನಿಗಳು ಈ ಕೋಡ್ ಅನ್ನು ಅಳವಡಿಸಿ ಕೊಳ್ಳಲು ಮತ್ತು ಪ್ರಮಾಣೀಕರಿಸಲು ಮತ್ತು ಪರಿಣಾಮಕಾರಿ ಅನುಸರಣೆ ಕಾರ್ಯಕ್ರಮವನ್ನು ಜಾರಿಗೆ ತರಲು ನಾನು ಬಲವಾಗಿ ಪ್ರೋತ್ಸಾಹಿಸುತ್ತೇನೆ. “