ಯಲಹಂಕದಲ್ಲಿರುವ ವಾಯುನೆಲೆಯ ಆವರಣದಲ್ಲಿ ಫೆ. 13ರಿಂದ 17ರ ವರೆಗೆ 14ನೇ ಏರೊ-ಇಂಡಿಯಾ ಪ್ರದರ್ಶನ ನಡೆಯಲಿದೆ. ಇದು ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಎಂದೇ ಹೆಸರಾಗಿದೆ.
ಜಗತ್ತಿನ ಪ್ರಖ್ಯಾತ ರಕ್ಷಣಾ ಸಲಕರಣೆಗಳ ಅಭಿವೃದ್ಧಿ ಕಂಪನಿಗಳು ಭಾಗಿಯಾಗುವ ನಿರೀಕ್ಷೆ ಇದ್ದು, ಒಟ್ಟು 35,000 ಚದರ ಅಡಿ ಪ್ರದೇಶದಲ್ಲಿ ಪ್ರದರ್ಶನ ನಡೆಯಲಿದೆ.
‘ಅತ್ಯಾಧುನಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಏರೋ-ಇಂಡಿಯಾ 2023ರಲ್ಲಿ ಪಾಲ್ಗೊಳ್ಳಲು ನಾವು ಉತ್ಸುಕರಾಗಿದ್ದೇವೆ’ ಎಂದು ಲಾಕ್ಹೀಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ವಿಲಿಯಮ್ ಬ್ಲೇರ್ ಹೇಳಿದ್ದಾರೆ.