ನವದೆಹಲಿ: ಭಾರತಕ್ಕೆ ಬರುವ ಪ್ರತಿಯೊಬ್ಬ ಅಫ್ಘಾನಿಸ್ತಾನದ ಪ್ರಜೆಗಳು ಕಡ್ಡಾಯವಾಗಿ ಇ-ವೀಸಾ ಪಡೆದಿರಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಕೇಂದ್ರವು ಹೊಸದಾದ ‘ಇ-ತುರ್ತು ಎಕ್ಸ್-ಮಿಸ್ಕ್, ವೀಸಾ’ವನ್ನು ಪರಿಚಯಿಸಿದ ಮರು ದಿನವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತಕ್ಕೆ ಪ್ರಯಾಣಿಸಲು ಇಚ್ಚಿಸುವ ಅಫ್ಗನ್ ಪ್ರಜೆಗಳು ಇ-ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿದೆ.
ಅಫ್ಗಾನಿಸ್ತಾನದಲ್ಲಿ ಭಾರತೀಯ ರಾಯಭಾರ ಕಚೇರಿಗಳು ಮುಚ್ಚಿರುವುದರಿಂದ, ವೀಸಾ ಅರ್ಜಿಗಳನ್ನು ನವದೆಹಲಿಯಲ್ಲಿ ಪರಿಶೀಲಿಸಿ, ಪ್ರಕ್ರಿಯೆ ಕೈಗೊಳ್ಳಲಾಗು ವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಇ-ತುರ್ತು ಎಕ್ಸ್-ಮಿಸ್ಕ್, ವೀಸಾ’ ಆರಂಭದಲ್ಲಿ ಆರು ತಿಂಗಳವರೆಗೆ ಮಾನ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅಫ್ಗಾನಿಸ್ತಾನದ ಯಾವುದೇ ಧರ್ಮ ದವರು ಇ-ವೀಸಾಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.