Wednesday, 11th December 2024

ಅಸ್ಸಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಸೋಂಕಿತ ವಲಯ ಘೋಷಣೆ

ಗುವಾಹಟಿ: ಅಸ್ಸಾಂನ ಬ್ರುಗಢ್‌ನ ಭೋಗಾಲಿ ಪಥರ್ ಗ್ರಾಮದ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, 1 ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮ ಗಳನ್ನು ‘ಸೋಂಕಿತ ವಲಯ’ ಎಂದು ಘೋಷಿಸಲಾಗಿದೆ.

ರೋಗ ವರದಿಯಾದ ಬಳೀಕ, 1 ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ‘ಸೋಂಕಿತ ವಲಯ’ ಎಂದು ಗೊತ್ತುಪಡಿಸಲಾಗಿದ್ದು, ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ ಎಂದು ಡಾ ಬರುವಾ ಹೇಳಿದ್ದಾರೆ.

ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ತ್ರಿಪುರಾ ಮತ್ತು ಮೇಘಾಲಯ ದಲ್ಲಿ ಇಲ್ಲಿಯವರೆಗೆ ಆಫ್ರಿಕನ್ ಹಂದಿ ಜ್ವರ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷವೂ ಈಶಾನ್ಯ ರಾಜ್ಯಗಳು ಹಂದಿ ಜ್ವರವನ್ನು ಎದುರಿಸಿದ್ದವು. ಸುಮಾರು 11,000 ಹಂದಿಗಳನ್ನು ಕೊಲ್ಲಲಾಗಿದೆ.