Sunday, 15th December 2024

ಜಮ್ಮು- ಕಾಶ್ಮೀರದಲ್ಲೂ AFSPA ತೆಗೆಯಲು ಚಿಂತನೆ: ರಾಜನಾಥ್ ಸಿಂಗ್

ನವದೆಹಲಿ: ಈಶಾನ್ಯದಿಂದ ಸಶಸ್ತ್ರ ಪಡೆಗಳ ಕಾಯ್ದೆಯನ್ನು (AFSPA) ಸಂಪೂರ್ಣವಾಗಿ ತೆಗೆದು ಹಾಕುವಂತೆ ಸೂಚಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈಶಾನ್ಯ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಎಎಫ್‌ಎಸ್ಪಿಎ ಹೋಗ ಬೇಕೆಂದು ರಕ್ಷಣಾ ಪಡೆಗಳು ಬಯಸುತ್ತವೆ ಎಂದು ಹೇಳಿದರು.

ಮೂರು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಿಂದ ವಿವಾದಾತ್ಮಕ ಕಾನೂನನ್ನ ಭಾಗಶಃ ತೆಗೆದು ಹಾಕಲಾಗಿದೆ.

ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, 1958 (ಎಎಫ್‌ಎಸ್ಪಿಎ) ಅಡಿ ಯಲ್ಲಿ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಭೌಗೋಳಿಕ ಸ್ಥಳವನ್ನು ಪ್ರಕ್ಷುಬ್ಧ ಪ್ರದೇಶವೆಂದು ಘೋಷಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಿಂದ ಕಾನೂನನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು ಎಂದು ಪ್ರತಿಭಟನೆಗಳು ಮತ್ತು ಬೇಡಿಕೆಗಳು ಬಂದಿವೆ.