Thursday, 12th December 2024

ಎಜಿ ಕೆ.ಕೆ.ವೇಣುಗೋಪಾಲ್ ಅಧಿಕಾರಾವಧಿ ವಿಸ್ತರಣೆ

ನವದೆಹಲಿ: ಅಟಾರ್ನಿ ಜನರಲ್​ ಕೆ.ಕೆ.ವೇಣುಗೋಪಾಲ್ ಅವರ ಅಧಿಕಾರಾವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿ ಸಿದೆ.

ಕೆ.ಕೆ.ವೇಣುಗೋಪಾಲ್​ ಅವರ ಅಧಿಕಾರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿ, ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದ್ದು, ಅಧಿಕಾರ ಅವಧಿ ಎರಡನೇ ಬಾರಿಗೆ ವಿಸ್ತರಣೆಯಾಗುತ್ತಿದ್ದು, ಅವರು 2022ರ ಜೂನ್​ 30ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಕೆ.ಕೆ.ವೇಣುಗೋಪಾಲ್​ ಅವರು 2017ರಲ್ಲಿ, ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದರು. 2020ರಲ್ಲೇ ಅವಧಿ ಮುಗಿಯಬೇಕಿತ್ತು. ಆದರೆ ಕೇಂದ್ರ ಸರ್ಕಾರ 2021ರ ಜೂ.30ರವರೆಗೆ ವಿಸ್ತರಿಸಿತ್ತು. ಇದೀಗ ಮತ್ತೊಂದು ವರ್ಷಗಳ ಕಾಲ ವಿಸ್ತರಣೆಯಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ಅವರು ನಿರ್ವಹಿಸುತ್ತಿರುವ ಉನ್ನತ ಮಟ್ಟದ ಪ್ರಕರಣಗಳು ಮತ್ತು ಬಾರ್‌ ಅಸೋಸಿಯೇಷನ್‌ನಲ್ಲಿ ಅವರ ಅನುಭವವನ್ನು ಪರಿಗಣಿಸಿ, ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಆದಷ್ಟು ಶೀಘ್ರ ಅಧಿಕೃತ ಆದೇಶ ಹೊರ ಬೀಳಲಿದೆ ಎಂದು ಮೂಲಗಳು ಹೇಳಿವೆ.