Thursday, 12th December 2024

ಆಗರ್ ಮಾಲ್ವಾದಿಂದ ಭಾರತ್ ಜೋಡೋ ಯಾತ್ರೆ ಆರಂಭ

ಆಗರ್ ಮಾಲ್ವಾ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯು ತ್ತಿರುವ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಧ್ಯ ಪ್ರದೇಶದಲ್ಲಿ 11ನೇ ದಿನಕ್ಕೆ ಕಾಲಿಟ್ಟಿದ್ದು, ಆಗರ್ ಮಾಲ್ವಾ ಜಿಲ್ಲೆಯಿಂದ ಶನಿವಾರ ಪುನರ್ ಆರಂಭವಾಯಿತು.
ಆಗರ್ ಮಾಲ್ವಾದ ಮಹುದಿಯಾ ಗ್ರಾಮದ ಬಸ್ ನಿಲ್ದಾಣದಲ್ಲಿ ಯಾತ್ರೆ ಆರಂಭ ವಾಯಿತು. ಇದು ಈವರೆಗೂ ರಾಹುಲ್ ನಡೆಸುತ್ತಿರುವ ಒಟ್ಟಾರೇ 87 ದಿನದ ಯಾತ್ರೆ ಯಾಗಿದೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿತ್ತು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಟಿ.ಎಂ. ಕೃಷ್ಣ ಈ ಯಾತ್ರೆಯಲ್ಲಿ ಪಾಲ್ಗೊಳ್ಳ ಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಅಮ್ಲಾ ಗ್ರಾಮದಲ್ಲಿ ಯಾತ್ರೆಗೆ ವಿರಾಮ ನೀಡಲಾಗಿದ್ದು, ಮಧ್ಯಾಹ್ನ ಸುಸ್ನೆರ್ ಟೌನ್ ನ ಜೈನ್ ಮಂದಿರದಿಂದ ಆರಂಭವಾಗ ಲಿದ್ದು, ಆಗರ್ ಮಾಲ್ವಾದ ಮಂಗೇಶ್ ಪುರ್ ಚೌರಾ ತಲುಪಲಿದೆ. ಲಾಲಾ ಖೇಡಿ ಗ್ರಾಮದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡವರು ರಾತ್ರಿ ತಂಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಯಾತ್ರೆ ಡಿ.4 ರಂದು ರಾಜಸ್ಥಾನ ತಲುಪಲಿದೆ.