Saturday, 14th December 2024

ಅಗ್ನಿಪಥ್ ಯೋಧರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ವಿಸ್ತರಿಸಿ

mamatabanerjee

ಬುರ್ದ್ವಾನ್: ಅಗ್ನಿಪಥ್ ಯೋಜನೆಯಡಿ ನೇಮಕವಾಗುವ ಯೋಧರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ವಿಸ್ತರಿಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೂತನ ಸೇನಾ ನೇಮಕಾತಿ ಯೋಜನೆ ಜಾರಿಗೊಳಿಸಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಅಗ್ನಿಪಥ್ ಯೋಜನೆಯಡಿ ನೇಮಕವಾಗುವ ಯೋಧರಿಗೆ ನಾಲ್ಕು ತಿಂಗಳ ಕಾಲ ತರಬೇತಿ ನೀಡಿ, ನಾಲ್ಕು ವರ್ಷಗಳಿಗೆ ನೇಮಕ ಮಾಡಲಾಗುತ್ತದೆ. ನಾಲ್ಕು ವರ್ಷಗಳ ನಂತರ ಈ ಯೋಧರು ಏನು ಮಾಡುತ್ತಾರೆ? ಅವರ ಮುಂದಿನ ಭವಿಷ್ಯವೇನು? ಇದು ಅಸ್ಥಿರವಾಗಿದೆ. ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.