Sunday, 24th November 2024

ಆಗ್ರಾ ಮೆಟ್ರೋ ಯೋಜನೆ: ಮೊದಲ ಹಂತಕ್ಕೆ ಇಂದು ಮೋದಿ ಚಾಲನೆ

ಆಗ್ರಾ : ಆಗ್ರಾ ಮೆಟ್ರೋ ಯೋಜನೆಯ ನಿರ್ಮಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಾರಂಭಿ ಸಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೌತಿಕವಾಗಿ ಹಾಜರಾಗಲಿದ್ದಾರೆ.

ವರ್ಚುವಲ್ ಮೆಟ್ರೋ ಉದ್ಘಾಟನೆ ತೋರಿಸಲು ದೊಡ್ಡ ಪರದೆ ಇರಿಸಲಾಗಿದೆ. ಉತ್ತರ ಪ್ರದೇಶ ಮೆಟ್ರೋ ರೈಲು ನಿಗಮ (ಯುಪಿಎಂಆರ್‌ಸಿ) 2022 ರ ಡಿಸೆಂಬರ್ ವೇಳೆಗೆ ಮೊದಲ ಹಂತವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

ಯೋಜನೆಯು ಸುಮಾರು 25 ಲಕ್ಷ ಸ್ಥಳೀಯರ ಸಂಚಾರವನ್ನು ಸರಾಗಗೊಳಿಸುವ ಮತ್ತು ಸ್ಮಾರಕಗಳು, ರೈಲ್ವೆ ನಿಲ್ದಾಣಗಳು ಮತ್ತು ಪ್ರಮುಖ ಮಾರುಕಟ್ಟೆಗಳಿಗೆ ಸಂಪರ್ಕವನ್ನು ಒದಗಿಸುವ ಗುರಿ ಹೊಂದಿದೆ. ಆಗ್ರಾ ಮೆಟ್ರೋ ರೈಲು ಯೋಜನೆಯ ಒಟ್ಟು ವೆಚ್ಚ 8379.62 ಕೋಟಿ ರೂ. ಆಗಿದೆ ಎಂದು ತಿಳಿದು ಬಂದಿದೆ.