ಅಹ್ಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಸೋಮವಾರ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS)ನ ನಾಲ್ವರು ಭಯೋತ್ಪಾದಕರನ್ನ ಬಂಧಿಸಿದೆ.
ಎಲ್ಲಾ ನಾಲ್ವರು ಭಯೋತ್ಪಾದಕರು ಶ್ರೀಲಂಕಾದ ಪ್ರಜೆಗಳಾಗಿದ್ದು, ಇಸ್ಲಾಮಿಕ್ ಸ್ಟೇಟ್ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಗುಜರಾತ್ ಎಟಿಎಸ್ ಎಲ್ಲಾ ನಾಲ್ವರು ಭಯೋತ್ಪಾದಕರನ್ನ ವಿಚಾರಣೆ ನಡೆಸುತ್ತಿದೆ.
ದೇಶದಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ನಡೆಸಲು ಶ್ರೀಲಂಕಾದಿಂದ ನಾಲ್ವರು ಐಸಿಸ್ ಭಯೋತ್ಪಾದಕರನ್ನು ಕಳುಹಿಸಲಾಗಿದೆ. ನಾಲ್ವರು ಭಯೋತ್ಪಾದಕರು ಶ್ರೀಲಂಕಾದಿಂದ ಚೆನ್ನೈ ಮೂಲಕ ಅಹಮದಾಬಾದ್ ತಲುಪಿದ್ದಾರೆ.
ಗುಜರಾತ್ ಎಟಿಎಸ್ ಎಲ್ಲಾ ನಾಲ್ವರು ಭಯೋತ್ಪಾದಕರನ್ನು ಬಂಧಿಸಿತು. ಈ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕವಾಗಿ ತಲುಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.