ನವದೆಹಲಿ: ಪಿಯುಸಿ ಕಲಿಕೆಯಲ್ಲಿ ಫಿಸಿಕ್ಸ್, ಮ್ಯಾಥ್ಸ್ ವಿಷಯ ತೆಗೆದುಕೊಳ್ಳದೆ ಎಂಜಿನಿಯರಿಂಗ್ ಓದಲು ಬಯಸುತ್ತಿದ್ದರೆ ನಿಮ್ಮ ಕನಸು ಸಾಕಾರಗೊಳ್ಳಲಿದೆ.
ಪದವಿಪೂರ್ವ ತರಗತಿಗಳಲ್ಲಿ ಅಥವಾ 12ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನ ಆಯ್ಕೆ ಮಾಡಿಕೊಳ್ಳ ದಿದ್ದರೂ ಎಂಜಿನಯರಿಂಗ್ ಪ್ರವೇಶ ಪಡೆಯುವ ಅವಕಾಶ ಪಡೆಯಲಿದ್ದೀರಿ. ಇಂಥ ಅವಕಾಶವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪರಿಗಣಿಸಿದ್ದು ತನ್ನ ಅಧೀನದ ಕಾಲೇಜುಗಳಿಗೆ ನೀಡಲಾದ ಮಾರ್ಗಸೂಚಿ ಹೊತ್ತಿಗೆಯಲ್ಲಿ ತಿಳಿಸಿದೆ.
ಈವರೆಗೆ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಪಿಯುಸಿಯಲ್ಲಿ ಫಿಸಿಕ್ಸ್ ಮತ್ತು ಗಣಿತ ವಿಷಯಗಳನ್ನ ಕಲಿಯು ವುದು ಕಡ್ಡಾಯವಾಗಿತ್ತು. ಆದರೆ, ಮಂಡಳಿಯು 14 ವಿಷಯಗಳ ಪಟ್ಟಿ ನೀಡಿದ್ದು, ಅದರ ಪೈಕಿ ಯಾವುದೇ ಮೂರು ವಿಷಯ ಗಳನ್ನ ಪಿಯುಸಿಯಲ್ಲಿ ಆರಿಸಿಕೊಂಡಿದ್ದರೆ ಸೂಕ್ತ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಅವಕಾಶ ನೀಡಲಾಗು ತ್ತದೆ. ಆದರೆ, ಮೂರು ವಿಷಯಗಳಲ್ಲಿ ಕನಿಷ್ಠ 45 ಪ್ರತಿಶತದಷ್ಟು ಅಂಕ ಪಡೆದುಕೊಂಡಿರಬೇಕು. ಮೀಸಲಾತಿ ವರ್ಗದ ವಿದ್ಯಾರ್ಥಿ ಗಳು ಶೇ. 40ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆದಿರಬೇಕು. ಈ ನೂತನ ನೀತಿ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಅಳವಡಿಕೆಯಾಗ ಲಿದೆ.
ಆ 14 ವಿಷಯಗಳು…
1) ಫಿಸಿಕ್ಸ್,
2) ಮ್ಯಾಥಮೆಟಿಕ್ಸ್,
3) ಕೆಮಿಸ್ಟ್ರಿ,
4) ಕಂಪ್ಯೂಟರ್ ಸೈನ್ಸ್,
5) ಎಲೆಕ್ಟ್ರಾನಿಕ್ಸ್,
6) ಇನ್ಫಾರ್ಮೇಶನ್ ಟೆಕ್ನಾಲಜಿ,
7) ಬಯೋಲಜಿ,
8) ಇನ್ಫಾರ್ಮಾಟಿಕ್ಸ್ ಪ್ರಾಕ್ಟೀಸಸ್,
9) ಬಯೋಟೆಕ್ನಾಲಜಿ,
10) ಟೆಕ್ನಿಕಲ್ ವೊಕೇಶನಲ್ ಸಬ್ಜೆಕ್ಟ್,
11) ಅಗ್ರಿಕಲ್ಚರ್,
12) ಎಂಜಿನಿಯರಿಂಗ್ ಗ್ರಾಫಿಕ್ಸ್,
13) ಬ್ಯುಸಿನೆಸ್ ಸ್ಟಡೀಸ್
14) ಆಂಥ್ರಪ್ರೆನ್ಯೂರ್ಶಿಪ್ (Entrepreneurship)
ಇದೊಂದು ವಿನೂತನ ಪ್ರಯೋಗವಾಗಿದ್ದು, ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಭಾಗವಾಗಿ ಇದರ ಅಳವಡಿಕೆಯಾಗುತ್ತಿದೆ. ಮಕ್ಕಳಲ್ಲಿ ಪ್ರಯೋಗಶೀಲತೆ, ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾರ್ಗ ಅನುಸರಿಸುವುದು ನೂತನ ಶಿಕ್ಷಣ ನೀತಿಯ ಉದ್ದೇಶವಾಗಿದೆ.