Sunday, 15th December 2024

ಏಮ್ಸ್ ಸಂಸ್ಥೆಯ ವೈದ್ಯರಿಗೆ ಗಾಯ

ನವದೆಹಲಿ: ನಗರದ ಗೌತಮ್ ನಗರದಲ್ಲಿ ನಡೆದ ಹೊಡೆದಾಟದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಬ್ಬರು ವೈದ್ಯರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಭಗತ್ ಸಿಂಗ್ ವರ್ಮಾ ಎಂಬವರ ಅಂಗಡಿಗೆ ತೆರಳಿದ್ದ ಏಮ್ಸ್‌ನ ವೈದ್ಯರು ಅಲ್ಲಿ ಮದ್ಯ ಸೇವಿಸಿದ್ದರು ಎಂದು ಆಪಾದಿಸಲಾಗಿದೆ. ವೈದ್ಯರು ಹಾಗೂ ಅಂಗಡಿ ಯವರ ನಡುವೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಎರಡೂ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಹೇಳಿದ್ದಾರೆ.

ಘಟನೆಯಲ್ಲಿ ಏಮ್ಸ್‌ನ ಇಬ್ಬರು ವೈದ್ಯರು ಮತ್ತು ಅಂಗಡಿ ಮಾಲೀಕ ಭಗತ್ ಸಿಂಗ್ ವರ್ಮಾ ಮತ್ತು ಪುತ್ರ ಅಭಿಷೇಕ್ ಗಾಯಗೊಂಡಿದ್ದಾರೆ.