ಬೆಂಗಳೂರು: ಮುಂಬೈನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ (Air India Express) ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಲ್ಯಾಂಡ್ ಮಾಡಲಾಯಿತು. ಗುರುವಾರ ಐದು ಏರ್ ಇಂಡಿಯಾ ವಿಮಾನಗಳು, ಎರಡು ವಿಸ್ತಾರಾ ಮತ್ತು ಎರಡು ಇಂಡಿಗೊ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಏರ್ ಇಂಡಿಯಾ ನಿರ್ವಹಿಸುವ ಬೋಯಿಂಗ್ 777 ವಿಮಾನವು ಮುಂಬೈನಿಂದ ಬೆಳಿಗ್ಗೆ 7:05 ಕ್ಕೆ (ಭಾರತೀಯ ಕಾಲಮಾನ) ಪೂರ್ವ ಇಂಗ್ಲೆಂಡ್ ಅನ್ನು ಸುತ್ತುತ್ತಿದೆ. ಬಳಿಕ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಆನ್‌ಲೈನ್ ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್ 24 ತೋರಿಸಿದೆ.
ಎಐ 129 ವಿಮಾನವು ಇಳಿಯುವ ಒಂದು ಗಂಟೆ ಮೊದಲು ತುರ್ತು ಪರಿಸ್ಥಿತಿ ಘೋಷಿಸಿತು. ಇದು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 12:05 ಕ್ಕೆ (ಯುಕೆ ಸಮಯ) ಇಳಿಯಬೇಕಿತ್ತು. ಫ್ಲೈಟ್ ರಾಡಾರ್ 24 ರ ಇತ್ತೀಚಿನ ಮಾಹಿತಿಯ ಪ್ರಕಾರ, ವಿಮಾನವು ತಡವಾಗಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ವಿಮಾನಯಾನ ಸಂಸ್ಥೆಗಳು ಬಾಂಬ್ ಬೆದರಿಕೆಗಳನ್ನು ಸ್ವೀಕರಿಸುವ ಸಮಸ್ಯೆ ಸತತ ನಾಲ್ಕನೇ ದಿನವೂ ಮುಂದುವರಿದಿದೆ. ನಾಲ್ಕು ದಿನಗಳಲ್ಲಿ ಕನಿಷ್ಠ 20 ವಿಮಾನಗಳಿಗೆ ಬೆದರಿಕೆಗಳು ಬಂದಿವೆ. ಇಂದು ಐದು ಏರ್ ಇಂಡಿಯಾ ವಿಮಾನಗಳು, ಎರಡು ವಿಸ್ತಾರಾ ಮತ್ತು ಎರಡು ಇಂಡಿಗೊ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ಬೋಯಿಂಗ್ 787 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ನಂತರ 147 ಪ್ರಯಾಣಿಕರೊಂದಿಗೆ ಮುಂಬೈಗೆ ತೆರಳುತ್ತಿದ್ದ ವಿಸ್ತಾರಾ ವಿಮಾನವನ್ನು ಫ್ರಾಂಕ್‌ಪರ್ಟ್‌ನಿಂದ ಆಗಮಿಸಿದಾಗ ತಕ್ಷಣ ಭದ್ರತಾ ತಪಾಸಣೆ ಮಾಡಲಾಗಿದೆ.
ಇದನ್ನೂ ಓದಿ: Hoax Bomb Threats : ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿದ್ದು ಅಪ್ರಾಪ್ತ ವಯಸ್ಸಿನ ಬಾಲಕ!
16 ಅಕ್ಟೋಬರ್ 2024 ರಂದು ಫ್ರಾಂಕ್‌ಫರ್ಟ್‌ನಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರಾ ವಿಮಾನ ಯುಕೆ 028 ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕಗೆ ಒಳಗಾಯಿತು. ಪ್ರೋಟೋಕಾಲ್ ಪ್ರಕಾರ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಯಿತು. ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.
ಕಡ್ಡಾಯ ಭದ್ರತಾ ತಪಾಸಣೆಗಳನ್ನು ಪೂರ್ಣಗೊಳಿಸಲು ನಾವು ಭದ್ರತಾ ಸಂಸ್ಥೆಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ವಿಸ್ತಾರಾ ವಕ್ತಾರರು ಹೇಳಿದ್ದಾರೆ.