ಬೆಂಗಳೂರು : ಶಾರ್ಜಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ (Air India Express) ವಿಮಾನವು ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ತುರ್ತು ಲ್ಯಾಂಡಿಂಗ್ಗೆ ಸಿದ್ದತೆ ನಡೆಸಲಾಗುತ್ತಿದೆ. ವಿಮಾನವು ಕಳೆದ ಮೂರು ಗಂಟೆಗಳಿಂದ ತಿರುಚ್ಚಿ ವಿಮಾನ ನಿಲ್ದಾಣದ ಮೇಲೆಯೇ ಸುತ್ತಾಡುತ್ತಿದ್ದು ಇಂಧನ ಖಾಲಿಯಾದ ಬಳಿಕ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಲಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
There is no need for Panic.. They are defueling the Air India Express IX 613 by circling the airport, once fuel reached the tolerance they will make an safe landing. This is an routine safety protocol. Stop rumors. Share to your beloved ones family on-board. #AirIndia #AXB613 pic.twitter.com/KPcCa5NWGb
— Manigandan sekar (@SekarManigandan) October 11, 2024
ಹೈಡ್ರಾಲಿಕ್ ಸಿಸ್ಟಮ್ ವೈಫಲ್ಯದಿಂದಾಗಿ, ಲ್ಯಾಂಡಿಂಗ್ ಗೇರ್, ಬ್ರೇಕ್ ಮತ್ತು ಫ್ಲಾಪ್ಗಳಂಥ ಪ್ರಮುಖ ವ್ಯವಸ್ಥೆಗಳು ಕೆಲಸ ಮಾಡುತ್ತಿಲ್ಲ.ಇವೆಲ್ಲವೂ ನಿರ್ಣಾಯಕ ಅಂಶವಾಗಿದ್ದು ಹೀಗಾಗಿ ವಿಮಾನವನ್ನುಬೆಲ್ಲಿ ಲ್ಯಾಂಡಿಂಗ್ ಮಾಡಬೇಕಾಗಿದೆ. ಪೈಲಟ್ ಈ ವಿಷಯವನ್ನು ತಿರುಚ್ಚಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಬಳಿಕ ಇದರಿಂದಾಗಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.
ಸುರಕ್ಷಿತ ಲ್ಯಾಂಡಿಂಗ್ಗೆ ಪ್ರಯತ್ನಿಸುವ ಮೊದಲು ಹೆಚ್ಚುವರಿ ಇಂಧನ ಖಾಲಿ ಮಾಡಲು ವಿಮಾನವು ತಿರುಚ್ಚಿ ವಾಯುಪ್ರದೇಶದ ಮೇಲೆ 2 ಗಂಟೆಗೂ ಹೆಚ್ಚು ಕಾಲ ಸುತ್ತುತ್ತಿದೆ. ಹೈಡ್ರಾಲಿಕ್ ವೈಫಲ್ಯದ ಬಗ್ಗೆ ಪೈಲಟ್ ಗ್ರೌಂಡ್ ಕಂಟ್ರೋಲ್ಗೆ ಎಚ್ಚರಿಕೆ ನೀಡಿದ್ದರು ಎಂದು ತಿರುಚ್ಚಿ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಆತಂಕಕ್ಕೆ ತಕ್ಷಣದ ಕಾರಣವಿಲ್ಲ ಎಂದು ಭರವಸೆ ನೀಡಿದ್ದಾರೆ. ಇಂಧನವನ್ನು ಖಾಲಿ ಮಾಡಲು ಇದು ಪ್ರಸ್ತುತ ವಾಯುಪ್ರದೇಶದ ಸುತ್ತಲೂ ಸುತ್ತುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ಆಂಬ್ಯುಲೆನ್ಸ್ಗಳು ಮತ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದ್ದೇವೆ” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ flightradar24.com ವಿಮಾನವು ತಿರುಚಿರಾಪಳ್ಳಿಯ ಮೇಲೆ ಲೂಪಿಂಗ್ ಮಾಡುತ್ತಿರುವುದನ್ನು ತೋರಿಸುತ್ತಿದೆ.