Thursday, 19th September 2024

ಏರ್ ಇಂಡಿಯಾ ಸರ್ವರ್ ಹ್ಯಾಕ್: 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ

ನವದೆಹಲಿ: ಏರ್ ಇಂಡಿಯಾ ಸರ್ವರ್ ಹ್ಯಾಕ್ ಆಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ.

ಏರ್ ಇಂಡಿಯಾದ ಡೇಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಮ್ ಮೇಲೆ ಸೈಬರ್ ದಾಳಿಯಾಗಿದೆ. ಇದರಿಂದಾಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಆಗಸ್ಟ್ 26, 2011ರಿಂದ ಫೆಬ್ರವರಿ 26, 2021 ನಡುವೆ ನೋಂದಾವಣೆ ಮಾಡಿದ ಪ್ರಯಾಣಿಕರ ಹೆಸರು, ಸಂಪರ್ಕ, ಪಾಸ್ಪೋರ್ಟ್ ಮಾಹಿತಿ, ಟಿಕೆಟ್ ವಿವರ, ಕ್ರೆಡಿಟ್ ಕಾರ್ಡ್ ಗಳ ಮಾಹಿತಿ ಸೋರಿಕೆ ಯಾಗಿದೆ ಎಂದು ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತಿಳಿಸಿದೆ.

ಈ ನಡುವೆ ಕ್ರೆಡಿಟ್ ಕಾರ್ಡ್ ಹೊಂದಿದವರ ಮಾಹಿತಿಯನ್ನು ಸಿಟಾ PSS ನಲ್ಲಿ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿ ಹೊಂದಿದ ಸಿಟಾ ಸರ್ವರ್ ಸೈಬರ್ ದಾಳಿಗೆ ತುತ್ತಾಗಿ ವಿಶ್ವದ ಸುಮಾರು 45 ಲಕ್ಷ ಪ್ರಯಾಣಿಕರ ಡೇಟಾ ಸೋರಿಕೆಯಾಗಿದೆ ಎಂದು ಏರ್ ಇಂಡಿಯಾ ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದೆ. ಪರಿಶೀಲನೆಗಾಗಿ ಬಾಹ್ಯ ತಜ್ಞರನ್ನು ನಿಯೋಜಿಸಲಾಗಿದ್ದು, ಕ್ರೆಡಿಟ್ ಕಾರ್ಡ್ ಸೋರಿಕೆಯಾದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವಂತೆ ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕುಗಳಿಗೆ ತಿಳಿಸಲಾಗಿದೆ.