Saturday, 14th December 2024

ಏರ್​ ಇಂಡಿಯಾಕ್ಕೆ ಮತ್ತೆ 30 ಲಕ್ಷ ರೂಪಾಯಿ ದಂಡ

ವ ದೆಹಲಿ: ಯುಎಸ್​ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಶಂಕರ್​ ಮಿಶ್ರಾ ಎಂಬಾತ ತನ್ನ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ, ಆ ಸಂದರ್ಭವನ್ನು ವಿಮಾನದಲ್ಲಿದ್ದ ಸಿಬ್ಬಂದಿ ಸರಿಯಾಗಿ ನಿಭಾಯಿಸಲಿಲ್ಲ.

ನಿರ್ಲಕ್ಷಿಸಿದರು ಎಂಬ ಕಾರಣಕ್ಕೆ ಇತ್ತೀಚೆಗಷ್ಟೇ ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲ, ಪ್ಲೈಟ್​ ಕಮಾಂಡರ್ (ಕ್ಯಾಪ್ಟನ್​ ಪೈಲೆಟ್​)​​ ಲೈಸೆನ್ಸ್​​ನ್ನು ಮೂರು ತಿಂಗಳ ಅವಧಿಗೆ ರದ್ದು ಗೊಳಿಸಿದೆ. ಏರ್​ ಇಂಡಿಯಾ ಪ್ಲೈಟ್​ ಇನ್​ ಸರ್ವೀಸ್​ ಡೈರೆಕ್ಟರ್​​ಗೂ 3 ಲಕ್ಷ ರೂ. ದಂಡ ವಿಧಿಸಿತ್ತು.

ಡಿಸೆಂಬರ್​ 6ರಂದು ಪ್ಯಾರಿಸ್​ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ನೊಬ್ಬ ಅನುಚಿತವಾಗಿ ವರ್ತಿಸಿದ್ದ. ವಿಮಾನದ ಶೌಚಾಲಯಕ್ಕೆ ಹೋಗಿ ಅಲ್ಲಿ ಧೂಮಪಾನ ಮಾಡಿದ್ದಲ್ಲದೆ, ಕುಡಿದು ಅಮಲೇರಿಸಿಕೊಂಡು ತನ್ನ ಪಕ್ಕದ ಸೀಟ್​ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆ ಸೀಟ್​​ ಮಹಿಳೆಯೊಬ್ಬರಿಗೆ ಸೇರಿದ್ದಾಗಿತ್ತು. ಆದರೆ ಅವರ ಕಂಬಳಿ ಮಾತ್ರ ಅಲ್ಲಿತ್ತು. ಮಹಿಳೆ ಅಲ್ಲಿಂದ ಎದ್ದು ಆಚೆ ಹೋದಾಗ ಈ ಪ್ರಯಾಣಿಕ ಅಲ್ಲಿ ಹೋಗಿ ಕಂಬಳಿಯ ಮೇಲೆಯೂ ಮೂತ್ರ ವಿಸರ್ಜನೆ ಮಾಡಿದ್ದ. ಅಂದು ವಿಮಾನ ಸಿಬ್ಬಂದಿ ಈ ವಿಷಯವನ್ನು ಏರ್​ಟ್ರಾಫಿಕ್​ ಕಂಟ್ರೋಲ್​​ಗೆ ತಿಳಿಸಿದ್ದರು. ದೆಹಲಿ ಏರ್​ಪೋರ್ಟ್​​ನಲ್ಲಿ ಇಳಿದ ಈತನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಆದರೆ ಮಹಿಳೆ ದೂರು ನೀಡಲು ನಿರಾಕರಿಸಿದ ಕಾರಣ, ಆತನನ್ನು ಬಿಟ್ಟು ಕಳಿಸಲಾಗಿತ್ತು. ಶಂಕರ್​ ಮಿಶ್ರಾ ಕೇಸ್​​​ನ ಗಲಾಟೆಯಲ್ಲಿ ಈ ಪ್ರಕರಣ ಅಷ್ಟೊಂದು ದೊಡ್ಡ ಸುದ್ದಿಯನ್ನೇ ಮಾಡಿರಲಿಲ್ಲ.

ಆದರೆ ಈ ಘಟನೆ ಬೇರೆ ಮೂಲಗಳಿಂದ DGCA ಗಮನಕ್ಕೆ ಬಂದಿತ್ತು.