Sunday, 15th December 2024

ಛತ್ರಪತಿ ಶಿವಾಜಿ ಅಂ.ವಿಮಾನ ನಿಲ್ದಾಣ 6 ಗಂಟೆ ಬಂದ್‌

ಮುಂಬೈ: ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡು ರನ್‌ ವೇಯನ್ನು ಮೇ 10ರಂದು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ತನಕ (6 ಗಂಟೆಗಳ ಕಾಲ) ಮುಚ್ಚಲಾಗುತ್ತದೆ.

ಮುಂಗಾರು ಪೂರ್ವ ಕಾಮಗಾರಿಗಳಿಗಾಗಿ ನಿಲ್ದಾಣವನ್ನು ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ಯಾವುದೇ ವಿಮಾನಗಳು ಹಾರಾಟ, ಲ್ಯಾಂಡ್ ಆಗುವುದಿಲ್ಲ.

ಕಾಮಗಾರಿಗಳ ಕುರಿತು ವಿಮಾನಯಾನ ಸಂಸ್ಥೆಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಈ ಅವಧಿಯಲ್ಲಿನ ವಿಮಾನಗಳ ಹಾರಾಟದಲ್ಲಿ ಬದಲಾವಣೆ ಮಾಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ.