Thursday, 12th December 2024

ರಾಜಸ್ಥಾನದ ಉಸ್ತುವಾರಿ ಅಜಯ್ ಮಕೇನ್ ರಾಜೀನಾಮೆ

ಜೈಪುರ: ರಾಜಸ್ಥಾನದ ಉಸ್ತುವಾರಿ ಸ್ಥಾನಕ್ಕೆ ಕಾಂಗ್ರೆಸ್‌ನ ಅಜಯ್ ಮಕೇನ್ ರಾಜೀನಾಮೆ ನೀಡಿದ್ದಾರೆ.

ಸೆಪ್ಟೆಂಬರ್ ಅಂತ್ಯದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿಎಂ ಹುದ್ದೆ ಯನ್ನು ಬಿಟ್ಟು ಕೊಡಲು ನಿರಾಕರಿಸಿದಾಗ ಮಕೇನ್ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗೆಹ್ಲೋಟ್‌ಗೆ ನಿಷ್ಠ 90 ಕ್ಕೂ ಹೆಚ್ಚು ಶಾಸಕರು ಗೆಹ್ಲೋಟ್ ಬದಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪಕ್ಷದ ಪ್ರಮುಖ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ಬದಲಿಗೆ ಗೆಹ್ಲೋಟ್ ಅವರನ್ನು ಸಿಎಂ ಹುದ್ದೆಯಿಂದ ಕೈಬಿಡುವಂತೆ ಮಾಡುವ ಕಾಂಗ್ರೆಸ್ ನಾಯ ಕತ್ವದ ಪ್ರಯತ್ನವನ್ನು ವಿರೋಧಿಸಿ ತಮ್ಮ ರಾಜೀನಾಮೆ ನೀಡಲು ಸ್ಪೀಕರ್‌ ಬಳಿ ತೆರಳಿ ದ್ದರು.

ಇದು ಕಾಂಗ್ರೆಸ್‌ನ ರಾಜಸ್ಥಾನದ ಉಸ್ತುವಾರಿ ಸ್ಥಾನ ತ್ಯಜಿಸುವ ಅವರ ನಿರ್ಧಾರಕ್ಕೆ ಕಾರಣವಾಗಿದೆ.