ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Assembly election) ಮಹಾಯುತಿ (Mahayuti) ಮೈತ್ರಿಕೂಟ ಐತಿಹಾಸಿಕ ಗೆಲುವನ್ನು ಸಾಧಸಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಮೈತ್ರಿ ಪಕ್ಷದಲ್ಲಿ ಎಲ್ಲ ಘಾಟಾನುಘಟಿ ನಾಯಕರಿದ್ದು, ಯಾರಿಗೆ ಮಹಾ ಪಟ್ಟ ಸಿಗುತ್ತದೆ ಎಂಬುದು ಯಕ್ಷ ಪ್ರಶ್ನೆ. ಆದರೆ ಎನ್‌ಸಿಪಿಯ ನಾಯಕ ಅಜಿತ್ ಪವಾರ್ (Ajit Pawar) ಅಭಿಮಾನಿಗಳು ಪವಾರ್ ಮುಖ್ಯಮಂತ್ರಿಯಾಗಲಿ ಎಂದು ಬಯಸಿದ್ದಾರೆ. ಸಿಎಂ ಘೋಷಣೆಗೂ ಮುನ್ನವೇ ಪವಾರ್ ಅವರೇ ಭವಿಷ್ಯದ ಮುಖ್ಯಮಂತ್ರಿ ಎಂಬ ಬರಹವಿರುವ ಪೋಸ್ಟರ್‌ಗಳು ಮುಂಬೈನ ಬೀದಿಗಳಲ್ಲಿ ರಾರಾಜಿಸುತ್ತಿವೆ.
अजित पवार…. लवकरच मुख्यमंत्री!
— Omkar Wable (@omkarasks) November 22, 2024
Banners in Baramati 💫 pic.twitter.com/LxuQuHTQco
ನ. 22ರಂದು ಪುಣೆಯಲ್ಲಿ ಇದೇ ರೀತಿಯ ಪೋಸ್ಟರ್‌ಗಳನ್ನು ಅಳವಡಿಸಲಾಗಿತ್ತು. ಇದೀಗ ಮುಂದಿನ ಮುಖ್ಯಮಂತ್ರಿ ಪವಾರ್ ಎಂಬ ಪೋಸ್ಟರ್‌ಗಳು ಭಾನುವಾರ ಮುಂಬೈನಲ್ಲಿ ಕಾಣಿಸಿಕೊಂಡಿವೆ. ಈ ಹಿಂದೆ ಪುಣೆಯಲ್ಲಿ ಹಾಕಿದ್ದ ಪೋಸ್ಟರನ್ನು ತೆರವು ಮಾಡಲಾಗಿತ್ತು ಹಾಗೂ ಎನ್‌ಸಿಪಿ ಕಾರ್ಯಕರ್ತನೊಬ್ಬ ಹಾಕಿದ್ದ ಎಂದು ತಿಳಿದು ಬಂದಿತ್ತು.
Maharashtra: Posters declaring Ajit Pawar as "Future CM" have appeared in Baramati, sparking a poster war within the Mahayuti alliance before the election results pic.twitter.com/vala1xQS7O
— IANS (@ians_india) November 22, 2024
ಏತನ್ಮಧ್ಯೆ, ಎನ್‌ಸಿಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ಸುನೀತ್ ತಟ್ಕರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಜಿತ್ ಪವಾರ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅನಿಲ್ ಪಾಟೀಲ್ ಅವರನ್ನು ಪಕ್ಷದ ಮುಖ್ಯ ಸಚೇತಕರಾಗಿ ಮರುನೇಮಕ ಮಾಡಲಾಗಿದೆ.
ಇದನ್ನೂ ಓದಿ : Ajit Pawar: ಮಹಾರಾಷ್ಟ್ರದ ಮುಂದಿನ ಸಿಎಂ ಅಜಿತ್ ಪವಾರ್? ರಿಸಲ್ಟ್‌ಗೂ ಮುನ್ನ ರಾರಾಜಿಸಿದ ಪೋಸ್ಟರ್
ಬಿಜೆಪಿ, ಶಿವಸೇನೆ (ಯುಬಿಟಿ) ಎನ್‌ಸಿಪಿ ಪಕ್ಷಗಳ ಮೈತ್ರಿಯಲ್ಲಿ ಮಹಾಯುತಿ ಗೆಲುವನ್ನು ಸಾಧಿಸಿದೆ. ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಜಿತ್ ಪವಾರ್ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವನ್ನು ಸಾಧಿಸಿದ್ದಾರೆ. ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಸ್ತುತ ಸಿಎಂ ಆಗಿರುವ ಏಕನಾಥ ಶಿಂಧೆ ಹಾಗೂ ಹಾಗೂ ಉಪ ಮುಖ್ಯಮಂತ್ರಿ ದೇವೆಂದ್ರ ಪಡ್ನವೀಸ್ ಕೂಡ ಸೇರಿದ್ದಾರೆ. ಈ ನಡುವೆ ಬಿಜೆಪಿ ಶಾಸಕರು ಮೈತ್ರಿ ಕೂಟದಲ್ಲಿ ಅತೀ ಹೆಚ್ಚು ಸೀಟ್ ಗೆದ್ದಿರುವ ಬಿಜೆಪಿಯಿಂದ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ. ಈ ಮಧ್ಯೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ (ಶಿಂಧೆ) ತಮ್ಮ ನಾಯಕ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಲಿ ಎಂದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
2019ರ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಪ್ರಮಾಣದ ಸದಸ್ಯ ಬಲವನ್ನು ಹೊಂದಿದ್ದರೂ ಮಿತ್ರ ಪಕ್ಷವಾಗಿದ್ದ ಶಿವಸೇನೆ (ಠಾಕ್ರೆ) ತನಗೇ ಮುಖ್ಯಮಂತ್ರಿ ಸ್ಥಾನ ಬೇಕೆಂದು ಪಟ್ಟು ಹಿಡಿದಿತ್ತು. ನಂತರ ಮೈತ್ರಿಯಲ್ಲಿ ಬಿರುಕು ಮೂಡಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಜತೆಗೂಡಿ ಸರ್ಕಾರ ರಚನೆ ಮಾಡಿತ್ತು. ಮತ್ತೆ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅದಿಕಾರಕ್ಕೆ ಬಂದಿತ್ತು. ಇದೀಗ ಬಿಜೆಪಿಗೆ ಮತ್ತದೇ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಸಿಎಂ ಯಾರಾಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.