ನವದೆಹಲಿ: ಕೈಗೆಟಕುವ ದರದ ವಿಮಾನಯಾನ ಸಂಸ್ಥೆ ಆಕಾಸ ಏರ್ ಭಾರತೀಯ ವೈಮಾನಿಕ ಸೇವೆಯಲ್ಲಿ ಒಂದು ವರ್ಷದ ಕಾರ್ಯಾಚರಣೆಯನ್ನು ಪೂರೈಸಿದೆ. ಮುಂಬೈನಿಂದ ಅಹಮದಾಬಾದ್‌ಗೆ ಹಾರಾಟ ನಡೆಸುವ ಮೂಲಕ 2022 ಆಗಸ್ಟ್ 07 ರಂದು ತನ್ನ ಮೊದಲ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿತ್ತು.
ಅದ್ಭುತ ನೆಟ್‌ವರ್ಕ್ ಮತ್ತು ಫ್ಲೀಟ್ ವಿಸ್ತರಣೆಯ ಜೊತೆಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ಯಾನ ಸಂಸ್ಥೆ ಪ್ರತಿ 15 ದಿನಗಳಿಗೊಮ್ಮೆ ಒಂದು ಹೊಸ ವಿಮಾನವನ್ನು ಪರಿಚಯಿಸುವ ಆರಂಭಿಕ ಯೋಜನೆ ಯನ್ನು ಹಾಕಿಕೊಂಡ ಆಕಾಸ ಏರ್ ದಾಖಲೆಯನ್ನೇ ಸೃಷ್ಟಿಸಿದೆ. ಈ ಮೂಲಕ 120 ವರ್ಷಗಳ ಜಾಗತಿಕ ವೈಮಾನಿಕ ವಲಯದ ಇತಿಹಾಸದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆ ಎಂಬುದಾಗಿ ಹೊರಹೊಮ್ಮಿದ್ದು, ವಾಣಿಜ್ಯಿಕ ಕಾರ್ಯಾಚರಣೆ ಆರಂಭಿಸಿದ 12 ತಿಂಗಳಲ್ಲಿ 20 ಹೊಸ ವಿಮಾನಗಳನ್ನು ಪರಿಚಯಿಸಿದೆ.
2023 ಆಗಸ್ಟ್ 1 ರಂದು ತನ್ನ 20ನೇ ವಿಮಾನವನ್ನು ಪರಿಚಯಿಸಿದ ಆಕಾಸ ಏರ್, ಬೋಯಿಂಗ್ 737 ಮ್ಯಾಕ್ಸ್‌ನ 737-8-200 ವೇರಿಯಂಟ್ ಅನ್ನು ತನ್ನ ಮಡಿಲಿಗೆ ಸೇರಿಸಿಕೊಂಡ ಏಷ್ಯಾದ ಮೊದಲ ವಿಮಾನ ಯಾನ ಸಂಸ್ಥೆಯಾಗಿ ಹೊರಹೊಮ್ಮಿದೆ. ಆಕಾಸ ಏರ್ 76 ಜೆಟ್‌ಗಳನ್ನು ಆರ್ಡರ್ ಮಾಡಿದೆ. ಇದರಲ್ಲಿ 737-8 ವೇರಿಯಂಟ್‌ನ 23 ವಿಮಾನಗಳು ಮತ್ತು 737-8-200 ವೇರಿಯಂಟ್‌ನ 53 ವಿಮಾನಗಳು ಸೇರಿವೆ. ಮತ್ತು ಬದ್ಧತೆಯು ನಮ್ಮ ಈ 12 ತಿಂಗಳದ ಕಾರ್ಯಾ ಚರಣೆಯನ್ನು ಯಶಸ್ವಿಯಾಗಿಸಿವೆ.”
ನಮ್ಮ ಯೋಜನೆಗಳಲ್ಲಿ ಅಪಾರ ವಿಶ್ವಾಸ ಇರಿಸಿದ ಮತ್ತು ಅದನ್ನು ಜಾರಿ ಮಾಡುವಲ್ಲಿ ಬೆಂಬಲ ನೀಡಿದ ನಮ್ಮ ಪಾಲುದಾರರಿಗೆ ನಾವು ಆಭಾರಿಯಾಗಿದ್ದೇವೆ. ಈವರೆಗೆ ನಮಗೆ ಅಗತ್ಯವಿದ್ದ ಎಲ್ಲ ನಿಯಂತ್ರಕ ಮಾರ್ಗದರ್ಶನಗಳನ್ನೂ ಮಾಡಿ, ನಿರಂತರ ಬೆಂಬಲ ನೀಡಿದ್ದಕ್ಕೆ ಡಿಜಿಸಿಎ ಮತ್ತು ಈ ಉದ್ಯಮದ ಪ್ರಗತಿಗೆ ಇಂಬು ನೀಡಿದ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನಾವು ಆಭಾರಿಯಾಗಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಮಹತ್ವಾಕಾಂಕ್ಷೆಗೆ ರಹದಾರಿಯಾದ ದಿವಂಗತ ಝುಂಝನ್‌ವಾಲಾ ಅವರನ್ನು ನಾನು ಈ ಸಮಯದಲ್ಲಿ ಸ್ಮರಿಸುತ್ತೇನೆ. ವಿಶ್ವ ದರ್ಜೆಯ ವಿಮಾನಯಾನ ಸೇವೆಯನ್ನು ರೂಪಿಸುವಲ್ಲಿ ಅವರು ಇಟ್ಟ ನಂಬಿಕೆ ಮತ್ತು ನಮ್ಮ ಮೇಲೆ ಅವರು ಇಟ್ಟ ವಿಶ್ವಾಸಕ್ಕೆ ನಾನು ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು” ಎಂದು ಅವರು ಹೇಳಿದ್ದಾರೆ.
“ನಮ್ಮ ಮೊದಲ ವರ್ಷದ ಕಾರ್ಯಾಚರಣೆಯು ಉತ್ತಮ ಅಡಿಪಾಯವನ್ನು ಹಾಕಿದೆ. ಭವಿಷ್ಯಕ್ಕೆ ಹೂಡಿಕೆ ಮಾಡುವ ವಿಷಯದಲ್ಲಿ ನಾವು ಅತ್ಯಂತ ಆಶಾದಾಯಕ ವಾಗಿದ್ದೇವೆ. ದೀರ್ಘಕಾಲದವರೆಗೂ ನಾವು ಭಾರತೀಯರಿಗೆ ಸೇವೆ ಸಲ್ಲಿಸುವ ಆಶಯವನ್ನು ಹೊಂದಿದ್ದೇವೆ” ಎಂದು ವಿನಯ್ ತಿಳಿಸಿದ್ದಾರೆ.