ಮುಂಬೈ : ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ (Maharashtra Assembly Election) ನಡೆಯುತ್ತಿರುವ ಹಿನ್ನಲೆಯಲ್ಲಿ ಬಾಲಿವುಡ್ ತಾರೆ ಅಕ್ಷಯ್ ಕುಮಾರ್ (Akshay Kumar) ಅವರು ಬುಧವಾರ ಬೆಳಗ್ಗೆ ಮುಂಬೈನಲ್ಲಿ ಮತ ಚಲಾಯಿಸಿದರು. ಮತಗಟ್ಟೆಯಿಂದ ಹೊರಬಂದ ಅಕ್ಷಯ್ ಮಾಧ್ಯಮದವರೊಂದಿಗೆ ಸಂವಾದ ನಡೆಸುತ್ತಿದ್ದಾಗ ವೃದ್ಧರೊಬ್ಬರು ಬಂದು ದೂರು ಹೇಳಿದ ಘಟನೆ ನಡೆದಿದೆ.
ಮತ ಚಲಾಯಿಸಿ ಹೊರ ಬರುತ್ತಿದ್ದ ಅಕ್ಷಯ್ ಕುಮಾರ್ನ್ನು ನೋಡಿ ವೃದ್ಧರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜುಹು ಬೀಚ್ ಬಳಿ ಇರುವ ಶೌಚಾಲಯ ಸರಿಯಾಗಿಲ್ಲ, ಅದರ ನಿರ್ವಹಣೆ ಸರಿಯಾಗಿ ಮಾಡಲಾಗುತ್ತಿಲ್ಲ ಎಂದು ದೂರನ್ನು ಹೇಳಿದ್ದಾರೆ. ಸದ್ಯರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. (Viral Video)
#AkshayKumar listened to the complaints of a citizen at the polling booth after casting his vote.#FilmfareLens #MaharashtraAssemblyElections2024 pic.twitter.com/vNM0c6Hk5h
— Filmfare (@filmfare) November 20, 2024
ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿ ಅಕ್ಷಯ್ ಕುಮಾರ್ ಬಳಿ ಬಂದು ಸರ್ ನೀವು ನಿರ್ಮಿಸಿದ್ದ ಶೌಚಾಲಯ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಬೃಹತ್ ಮುಂಬೈ ಮಹಾನಗರ ಕಾರ್ಪೋರೇಷನ್ ಅಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬೀಚ್ಗೆ ಬರುವ ಜನರಿಗೆ ಅದರಿಂದ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅಕ್ಷಯ್ ನಾನು ಬಿಎಂಸಿ ಜತೆ ಮಾತನಾಡಿ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು. ಆದರೂ ಅತೃಪ್ತನಾದ ವ್ಯಕ್ತಿ ಮತ್ತೊಂದು ಶೌಚಾಲಯ ನಿರ್ಮಾಣ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ದಿನವೂ ಶೌಚಾಲಯ ಹಾಳಾಗಿರುತ್ತದೆ, ಮತ್ತು ಅದಕ್ಕೆ ಹಣ ನೀಡಿ ಬಳಸಬೇಕಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ನಾನು ನನ್ನ ಕೆಲಸ ಮಾಡಿದ್ದೇನೆ. ಅದನ್ನು ನಿರ್ವಹಣೆ ಮಾಡುವ ಹೊಣೆ ಬಿಎಂಸಿ ಸಿಬ್ಬಂದಿಗಳದ್ದು ಆದರೂ ಅದನ್ನು ಸರಿ ಪಡಿಸುವಂತೆ ಹೇಳುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : Akshay Kumar: ಮತ್ತೊಂದು ಬಯೋಪಿಕ್ನಲ್ಲಿ ಅಕ್ಷಯ್ ಕುಮಾರ್; ಅನನ್ಯ ಪಾಂಡೆ, ಮಾಧವನ್ ಸಾಥ್
2017 ರಲ್ಲಿ, ಅಕ್ಷಯ್ ಅವರ ಪತ್ನಿ ಟ್ವಿಂಕಲ್ ಅವರು ಜುಹು ಕಡಲತೀರದಲ್ಲಿ ಬಹಿರಂಗವಾಗಿ ಮಲವಿಸರ್ಜನೆ ಮಾಡುತ್ತಿರುವ ವ್ಯಕ್ತಿಯ ಚಿತ್ರವನ್ನು ಪೋಸ್ಟ್ ಮಾಡಿದ್ದರು, ಮತ್ತು ಶುಭೋದಯ ಎಲ್ಲರಿಗೂ , ಬಹುಶಃ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಭಾಗ 2 ಇದೇ ಫೋಟೋದಿಂದ ಶುರುವಾಗಬಹುದು ಎಂದು ಬರೆದು ಕೊಂಡಿದ್ದರು. ಆ ಭಾಗದ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಬಯಲು ಶೌಚಾಲಯ ಬಳಸದೆ ಬೇರೆ ಆಯ್ಕೆ ಇರಲಿಲ್ಲ. ಇದನ್ನು ಗಮನಿಸಿದ ನಟ ಅಕ್ಷಯ್ ಕುಮಾರ್ 2018 ರಲ್ಲಿ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಜೊತೆ ಸೇರಿಕೊಂಡರು ಮತ್ತು ಸಾರ್ವಜನಿಕ ಬಳಕೆಗಾಗಿ ಜುಹು ಮತ್ತು ವರ್ಸೋವಾ ಬೀಚ್ಗಳ ಬಳಿ 10 ಲಕ್ಷ ರೂ. ವೆಚ್ಚದಲ್ಲಿ ಜೈವಿಕ ಶೌಚಾಲಯಗಳನ್ನು ಸ್ಥಾಪಿಸಿದ್ದರು.