Sunday, 15th December 2024

ಗುಂಡಿನ ಚಕಮಕಿ: ಅಲ್-ಬದ್ರ್‌ ಸಂಘಟನೆಯ ಉಗ್ರರ ಹತ್ಯೆ

ಶ್ರೀನಗರ: ಪುಲ್ವಾಮ ಜಿಲ್ಲೆಯ ಮಿಟ್ರಿಗಾಮ್‌ ಪ್ರದೇಶದಲ್ಲಿ ಗುರುವಾರ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಅಲ್-ಬದ್ರ್‌ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಹತರಾಗಿದ್ದಾರೆ.

‘ಹತರಾದ ಉಗ್ರರನ್ನು ಐಜಾಜ್ ಹಫೀಜ್ ಮತ್ತು ಶಾಹಿದ್ ಅಯೂಬ್ ಎಂದು ಗುರುತಿಸ ಲಾಗಿದ್ದು,ಈ ಇಬ್ಬರು ಅಲ್‌-ಬದ್ರ್‌ ಸಂಘಟನೆಗೆ ಸೇರಿದ್ದಾರೆ.

ಉಗ್ರರಿಂದ ಎರಡು ಎಕೆ-47 ರೈಫಲ್ಸ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಹೊರರಾಜ್ಯದ ಕಾರ್ಮಿಕರ ಮೇಲೆ ನಡೆದ ಸರಣಿ ದಾಳಿಯಲ್ಲಿ ಈ ಇಬ್ಬರು ಉಗ್ರರು ಭಾಗಿ ಯಾಗಿದ್ದರು ಎಂದು ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಮಿಟ್ರಿಗಮ್‌ ಪ್ರದೇಶವನ್ನು ಬುಧವಾರ ಸುತ್ತುವರೆ ದಿದ್ದ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಗುರುವಾರ ಮುಂಜಾನೆ ವೇಳೆಗೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ.