Wednesday, 11th December 2024

ಈ ಬಾರಿ ಕರ್ನಾಟಕದ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ: ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ಜನತಾ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕರ್ನಾಟಕದ ಎಲ್ಲಾ ಸ್ಥಾನ ಗಳನ್ನು ಗೆಲ್ಲುತ್ತದೆ. ತಮಿಳುನಾಡು ಮತ್ತು ಕೇರಳದಲ್ಲೂ ಗಮನಾರ್ಹ ಸಾಧನೆ ಮಾಡಲಿದೆ ಎಂದು ರಕ್ಷಣಾ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಶುಕ್ರವಾರ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಲೋಕಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿ ಐದು ದಕ್ಷಿಣ ರಾಜ್ಯಗಳು ಹೊಂದಿರುವ 130 ಸ್ಥಾನಗಳಲ್ಲಿ ಕಮಲ ಪಕ್ಷ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ದರು. ಲೋಕಸಭೆಯಲ್ಲಿ ಬಿಜೆಪಿಯ 370 ಸ್ಥಾನಗಳ ಗುರಿಗೆ ದಕ್ಷಿಣದ ಈ ಸೀಟುಗಳನ್ನ ಗೆಲ್ಲುವುದು ನಿರ್ಣಾಯಕವಾಗಿದೆ ಎಂದರು.

“ಕರ್ನಾಟಕದ ಎಲ್ಲಾ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ” ಎಂದು ಸಿಂಗ್ ಹೇಳಿದ್ದಾರೆ.

ಕಳೆದ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹಳಷ್ಟು ಸೀಟುಗಳನ್ನು ಗೆದ್ದಿತ್ತು. ಆದರೆ ಲೋಕಸಭೆ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದು ಬಿಜೆಪಿಯೇ ಎಂದು ತಿಳಿಸಿದ್ದಾರೆ.

ನಾವು ಖಾತೆಯನ್ನು ತೆರೆಯುವುದು ಮಾತ್ರವಲ್ಲದೆ, ತಮಿಳುನಾಡಿನಲ್ಲಿ ಉತ್ತಮ ಸ್ಥಾನಗಳನ್ನು ಪಡೆಯುತ್ತೇವೆ. ಕ್ಷೇತ್ರಗಳ ಸಂಖ್ಯೆಯ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ, ಆದರೆ ಇದು ಉತ್ತಮ ಲೆಕ್ಕಾಚಾರವಾಗಿದೆ. ಕೇರಳದಲ್ಲೂ ಖಾತೆ ತೆರೆಯು ತ್ತೇವೆ. ಈ ಬಾರಿ ಬಿಜೆಪಿ ಖಾತೆ ತೆರೆಯದ ರಾಜ್ಯವೇ ಇರುವುದಿಲ್ಲ. ನಾವು ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆ ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುದುಚೇರಿ ಸೇರಿ ದಕ್ಷಿಣದ ಐದು ರಾಜ್ಯಗಳು ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 130 ಸ್ಥಾನಗಳನ್ನು ಹೊಂದಿವೆ. ಸಂಸತ್ತಿನ ಕೆಳಮನೆಯಲ್ಲಿ ತಮಿಳುನಾಡು 39 ಸ್ಥಾನಗಳನ್ನು ಹೊಂದಿದ್ದರೆ, ಕರ್ನಾಟಕವು 28. ಆಂಧ್ರಪ್ರದೇಶವು ಲೋಕಸಭೆಯಲ್ಲಿ 25 ಸ್ಥಾನಗಳನ್ನು ಮತ್ತು ಕೇರಳ 20 ಸ್ಥಾನಗಳನ್ನು ಹೊಂದಿದೆ. ತೆಲಂಗಾಣವು 17 ಸಂಸದರನ್ನು ಹೊಂದಿದೆ.