Monday, 16th September 2024

’ಗೋವನ್ನು ರಾಷ್ಟ್ರೀಯ ಪ್ರಾಣಿ’ – ಅಲಹಾಬಾದ್‌ ಕೋರ್ಟ್‌ ಅಭಿಪ್ರಾಯಕ್ಕೆ ಭಾರೀ ಬೆಂಬಲ

ಲಖನೌ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್’ನ ಅಭಿಪ್ರಾಯವನ್ನು ಮುಸ್ಲಿಂ ಧರ್ಮಗುರುಗಳು ಸ್ವಾಗತಿಸಿದ್ದಾರೆ. ಈ ನಡೆಯು ಸಮಾಜದ ವಿವಿಧ ವರ್ಗಗಳ ನಡುವೆ ಸಹೋದರತ್ವ ಹೆಚ್ಚುತ್ತದೆ ಮತ್ತು ಏಕತೆಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರು, ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾ ಅಧ್ಯಕ್ಷರು ಮತ್ತು ಪ್ರಮುಖ ಸುನ್ನಿ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ, ಹೈಕೋರ್ಟ್ ಅಭಿಪ್ರಾಯ ಜಾರಿಗೆ ತರಬೇಕು ಎಂದು ಹೇಳಿದ್ದಾರೆ.

ಹೈಕೋರ್ಟ್ ಅಭಿಪ್ರಾಯವನ್ನು ಸ್ವಾಗತಿಸುತ್ತೇನೆ. ದೇಶದಲ್ಲಿ ಅನೇಕ ವರ್ಷಗಳಿಂದ ಸೌಹಾರ್ದತೆ ಮತ್ತು ಸಹೋದರತ್ವ ದಿಂದ ಬದುಕುತ್ತಿದ್ದೇವೆ. ಮೊಘಲ್ ದೊರೆ ಬಾಬರ್ ಕೂಡ ತನ್ನ ಉತ್ತರಾಧಿಕಾರಿ ಮತ್ತು ಮಗ ಹುಮಾಯೂನ್ ಅವರನ್ನು ಹಿಂದೂ ಭಾವನೆಗಳನ್ನು ಗೌರವಿಸುವಂತೆ ಮತ್ತು ಗೋಹತ್ಯೆಯನ್ನು ನಿಷೇಧಿಸು ವಂತೆ ಹೇಳಿದ್ದರು ಎಂದು ಮೌಲಾನ ತಿಳಿಸಿದ್ದಾರೆ.

ಆಲ್ ಇಂಡಿಯಾ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಿಯಾ ಧರ್ಮಗುರು ಮೌಲಾನಾ ಯಾಸೂಬ್ ಅಬ್ಬಾಸ್ ಕೂಡ ಸಲಹೆ ಯನ್ನು ಬೆಂಬಲಿಸಿದ್ದು, ಗೋಹತ್ಯೆಯನ್ನು ನಿಷೇಧಿಸಲಾಗಿದೆ. ಇದು ಇಸ್ಲಾಂ ಮತ್ತು ಭಾರತೀಯ ಸಂಸ್ಕೃತಿಯ ನಿಜವಾದ ಸಂದೇಶವಾಗಿದೆ ಎಂದಿದ್ದಾರೆ.

ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ, ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವುದು ರಾಷ್ಟ್ರಕ್ಕೆ ಗೌರವ ಎಂದಿದ್ದಾರೆ.

 

Leave a Reply

Your email address will not be published. Required fields are marked *