Thursday, 12th December 2024

ಹಳೆಯ ನೋಟು ವಿನಿಮಯಕ್ಕೆ ಅವಕಾಶ ನೀಡಿ: ಬಾಂಬೆ ಹೈಕೋರ್ಟ್ ನಿರ್ದೇಶನ

ಮುಂಬೈ (ಮಹಾರಾಷ್ಟ್ರ): 1.6 ಲಕ್ಷ ರೂ. ಮೌಲ್ಯದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅರ್ಜಿದಾರ ಕಿಶೋರ್ ಸೊಹೋನಿಗೆ ಅವಕಾಶ ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್’ಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹಳೆಯ ವಂಚನೆ ಪ್ರಕರಣದಲ್ಲಿ, ಕಲ್ಯಾಣ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮಾರ್ಚ್ 2016 ರಲ್ಲಿ ಆರೋಪಿಗಳಿಗೆ ಸ್ಥಳೀಯ ಪೊಲೀಸ್ ಠಾಣೆಗೆ 1.6 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುವಂತೆ ಸೂಚಿಸಿದ್ದರು.

ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಡಿಸೆಂಬರ್ 31, 2016 ರ ಗಡುವಿನ ಮೊದಲು ಹಣ ಸಂಗ್ರಹಿಸಲು ಅನುಮತಿ ನೀಡುವಂತೆ ಸೊಹೊನಿ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡಿದರೂ, ಅವರಿಗೆ ಹಾಗೆ ಮಾಡಲು ಅವಕಾಶ ನೀಡಲಿಲ್ಲ ಮತ್ತು ಆದೇಶವನ್ನು ಮಾರ್ಚ್ 20, 2017 ರಂದು ಮಾತ್ರ ಅಂಗೀಕರಿಸಲಾಯಿತು.