Saturday, 14th December 2024

Allu Arjun: ಕಾನೂನು ಪಾಲಿಸುವ ನಾಗರಿಕ ನಾನು… ತನಿಖೆಗೆ ಸಹಕರಿಸುತ್ತೇನೆ; ಜೈಲಿನಿಂದ ರಿಲೀಸ್‌ ನಂತರ ಅಲ್ಲು ಅರ್ಜುನ್‌ ಫಸ್ಟ್‌ ರಿಯಾಕ್ಷನ್‌

allu arjun

ಹೈದರಾಬಾದ್‌: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಧನಕ್ಕೊಳಗಾಗಿದ್ದ ಟಾಲಿವುಡ್‌ ನಟ ಅಲ್ಲು ಅರ್ಜುನ್‌ (Allu Arjun) ಅವರು ತೆಲಂಗಾಣ ಹೈಕೋರ್ಟ್‌ ಮಧ್ಯಂತರ ಜಾಮೀನಿನ ಮೇಲೆ ಇಂದು ಹೊರ ಬಂದಿದ್ದಾರೆ. ಬಿಡುಗಡೆಯಾಗಿ ಹೊರ ಬರುತ್ತಿದ್ದಂತೆ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದ್ದು, ಅಲ್ಲಿ ಅವರ ತಾಯಿ, ಪತ್ನಿ ಮತ್ತು ಮಕ್ಕಳು ಸೇರಿದಂತೆ ಕುಟುಂಬಸ್ಥರು ಬರಮಾಡಿಕೊಂಡಿದ್ದಾರೆ. ಇನ್ನು ಅಲ್ಲು ಅರ್ಜುನ್ ಅವರನ್ನು ಕರೆದೊಯ್ಯಲು ಅವರ ತಂದೆ ಅಲ್ಲು ಅರವಿಂದ್‌ ಮತ್ತು ಮಾವ ಹೈದರಾಬಾದ್‌ನ ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಬೆಳಗ್ಗೆಯೇ ತಲುಪಿದ್ದರು.

ಬಿಡುಗಡೆಯಾಗುತ್ತಿದ್ದಂತೆ ತಮ್ಮ ಬಂಧನದ ಬಗ್ಗೆ ಮೌನ ಮುರಿದ ಅಲ್ಲು ಅರ್ಜುನ್‌, ನಾನು ಕಾನೂನು ಪಾಲನೆ ಮಾಡುವ ನಾಗರಿಕ. ತನಿಖೆಗೆ ಸಹರಿಸುತ್ತೇನೆ. ಕಾನೂನನ್ನು ನಾನು ಗೌರವಿಸುತ್ತೇನೆ.ಕಳೆದ 20 ವರ್ಷಗಳಿಂದ ನಾನು ನನ್ನ ನನ್ನ ಸಿನಿಮಾಗಳನ್ನು ನೋಡಲು ಚಿತ್ರಮಂದಿರಕ್ಕೆ ಹೋಗುತ್ತೇನೆ. ಆದರೆ ಇಂತಹ ದುರ್ಘಟನೆ ಎಂದೂ ಸಂಭವಿಸಿರಲಿಲ್ಲ. ನಡೆದಿರುವ ದುರ್ಘಟನೆ ಬಗ್ಗೆ ವಿಷಾಧವಿದೆ. ನಾನು ಆ ಕುಟುಂಬಸ್ಥರಲ್ಲಿ ಕ್ಷಮೆಯಾಚಿಸುತ್ತೇನೆ. ಎಂದು ಹೇಳಿದ್ದಾರೆ.

ಇನ್ನು ಅಲ್ಲು ಅರ್ಜುನ್ ಅವರ ವಕೀಲ ಅಶೋಕ್ ರೆಡ್ಡಿ ಪ್ರತಿಕ್ರಿಯಿಸಿದ್ದು, ನಿನ್ನೆ ತೆಲಂಗಾಣ ಹೈಕೋರ್ಟ್‌ನಿಂದ ಆದೇಶದ ಪ್ರತಿ ಪಡೆದರೂ ಜೈಲು ಅಧಿಕಾರಿಗಳು ಬಿಡುಗಡೆ ಮಾಡದ ಕಾರಣ ಅಕ್ರಮ ಬಂಧನ ಎಂದು ಕಿಡಿಕಾರಿದ್ದಾರೆ. ಪೊಲೀಸರು ಹೈಕೋರ್ಟ್‌ನಿಂದ ಆದೇಶದ ಪ್ರತಿಯನ್ನು ಸ್ವೀಕರಿಸಿದ್ದರೂ ಅಲ್ಲು ಅರ್ಜುನ್‌ ಅವರನ್ನು ಬಿಡುಗಡೆ ಮಾಡಲಿಲ್ಲ. ಅವರು ಉತ್ತರಿಸಬೇಕಾಗುತ್ತದೆ. ಇದು ಕಾನೂನುಬಾಹಿರ ಬಂಧನವಾಗಿದೆ. ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಎಂದರು.

ಡಿ. 4ರಂದು ಹೈದರಾಬಾದ್‌ನಲ್ಲಿ ನಡೆದ ‘ಪುಷ್ಪ 2’ ಚಿತ್ರದ ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಅಲ್ಲು ಅರ್ಜುನ್‌ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಮಧ್ಯಾಹ್ನ ನಾಂಪಲ್ಲಿ ಕೋರ್ಟ್‌ ಅಲ್ಲು ಅರ್ಜನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ತೆಲಂಗಾಣ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

ಈ ಸುದ್ದಿಯನ್ನೂ ಓದಿ: Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌