ಹೈದರಾಬಾದ್: ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರನ್ನು ಸಂಧ್ಯಾ ಥಿಯೇಟರ್ನ (Sandhya Theatre) ಕಾಲ್ತುಳಿತದ ಪ್ರಕರಣದಲ್ಲಿ ನಿನ್ನೆ(ಡಿ.13) ಬಂಧಿಸಲಾಗಿತ್ತು. ಕೋರ್ಟ್ ನಟನಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನೂ ವಿಧಿಸಿತ್ತು. ಆದರೆ ನಟ ಅಲ್ಲು ಅರ್ಜುನ್ ಅವರಿಗೆ ಹೈಕೋರ್ಟ್(High Court) ಮಧ್ಯಂತರ ಜಾಮೀನು ನೀಡಿದ್ದು, ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಇನ್ನು ನಿನ್ನೆ ರಾತ್ರಿ ಜೈಲಿನಲ್ಲಿ ಕಳೆದಿದ್ದ ಅಲ್ಲು ಇಂದು(ಡಿ.14) ಹೊರ ಬಂದಿದ್ದು, ಈ ವೇಳೆ ಅವರ ತಂದೆ ಅಲ್ಲು ಅರವಿಂದ್ ಪುತ್ರನನ್ನು ಕರೆದೊಯ್ಯಲು ಕಾರಾಗ್ರಹದ ಬಳಿ ಬಂದಿದ್ದರು. ಅಷ್ಟೇ ಅಲ್ಲದೆ, ಮನೆಗೆ ಬಂದ ಅವರು ತಮ್ಮ ತಾಯಿ ಹೆಂಡತಿ(Wife) ಮತ್ತು ಮಗಳನ್ನು(Daughter) ಪ್ರೀತಿಯಿಂದ ತಬ್ಬಿಕೊಂಡು ಭಾವುಕರಾಗಿದ್ದಾರೆ. ಈಗ ಆ ವಿಡಿಯೊ ಸಾಕಷ್ಟು ಕಡೆ ವೈರಲ್ ಆಗಿದೆ.
♥️🥺 Pure Soul!
— Trends Allu Arjun ™ (@TrendsAlluArjun) December 14, 2024
The person behind this illegal arrest will get his reward. Will be there for that moment.🤝@alluarjun #AlluArjun pic.twitter.com/Xlx8YGNY2X
ನಿನ್ನೆ ಮಧ್ಯಾಹ್ನ ಪೊಲೀಸರು ನೇರ ಅಲ್ಲು ಅರ್ಜುನ್ ಅವರ ಬೆಡ್ ರೂಮಿಗೆ ನುಗ್ಗಿದ್ದು,ಬಟ್ಟೆ ಬದಲಿಸಲೂ ಅವಕಾಶ ಕೊಡದೆ ಬಂಧಿಸಿದ್ದು, ಕೋರ್ಟ್ ನಟನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು. ಈ ಮಧ್ಯೆ ಕೆಲವೇ ಗಂಟೆಗಳಲ್ಲಿ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿತು. ಐಕಾನ್ ಸ್ಟಾರ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದರು.
ನಿನ್ನೆ ರಾತ್ರಿ ಜೈಲಿನಲ್ಲಿ ಕಳೆದಿದ್ದ ನಟ ಇಂದು ಹೊರಬಂದಿದ್ದು,ತಾಯಿ ಮತ್ತು ಕುಟುಂಬದ ಇತರ ಸದಸ್ಯರನ್ನೂ ಭೇಟಿಯಾಗಿದ್ದಾರೆ. ಇನ್ನು ಮನೆಗೆ ಬಂದ ಅಲ್ಲು ಓಡಿ ಹೋಗಿ ತಮ್ಮ ಮಗಳನ್ನು ಎತ್ತಿಕೊಂಡು ಮುದ್ದಾಡಿದ್ದು,ಹೆಂಡತಿಯನ್ನು ತಬ್ಬಿಕೊಂಡಿದ್ದಾರೆ. ಮನೆಯವರು ನಟನಿಗೆ ಕುಂಬಳಕಾಯಿ ನಿವಾಳಿಸಿ ದೃಷ್ಟಿ ತೆಗೆದು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ. ಈ ಮಧ್ಯೆ ನಟ ಮನೆಯ ಹೊರಗಿದ್ದ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಆ ವಿಡಿಯೊವನ್ನು ಹಲವು ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಅಲ್ಲು ಅರ್ಜುನ್ ಬಂಧನ ಇಡೀ ತೆಲಗು ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಿತ್ತು. “ಇದೊಂದು ಶಾಕಿಂಗ್ ಸುದ್ದಿ, ನನಗೆ ಆಘಾತವಾಗಿದೆ. ಯಾವುದನ್ನೂ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಅನೇಕ ನಟ-ನಟಿಯರು ಅಲ್ಲು ಅರ್ಜುನ್ ಪರ ಧ್ವನಿಎತ್ತಿದ್ದರು.
ಬೆಡ್ ರೂಮಿಗೆ ಬರಬಾರದಿತ್ತು; ಪೊಲೀಸರ ವಿರುದ್ದ ಕಿಡಿಕಾರಿದ್ದ ಅಲ್ಲು
ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ವಿಡಿಯೊವೊಂದು ಸಾಕಷ್ಟು ವೈರಲ್ ಆಗಿತ್ತು. ವಿಡಿಯೊದಲ್ಲಿ ಪೊಲೀಸರು ತಮ್ಮನ್ನು ಬಂಧಿಸಿದ ರೀತಿಗೆ ನಟ ಅಸಮಾಧಾನ ಹೊರಹಾಕಿದ್ದರು. ಪೊಲೀಸರು ನಟನನ್ನು ಬಂಧಿಸಲು ನೇರ ಬೆಡ್ ರೂಮಿಗೆ ನುಗ್ಗಿದ್ದು, ಇದರಿಂದ ಅಲ್ಲು ಫುಲ್ ಗರಂ ಆಗಿದ್ದರು. “ಬಂಧನಕ್ಕೆ ಸಹಕರಿಸಲು ಸ್ವತಃ ನಾನೇ ಸಿದ್ಧನಿರುವಾಗ ಬೆಡ್‌ರೂಮ್‌ಗೆ ನುಗ್ಗುವ ಅವಶ್ಯಕತೆ ಏನಿತ್ತು? ನಾನು ಬೆಡ್‌ರೂಮ್‌ನಲ್ಲಿ ಆಗಷ್ಟೇ ಬಟ್ಟೆ ಬದಲಾಯಿಸುತ್ತಿದ್ದೆ. ಹೊರಗಡೆ ಬಂದು ಕರೆದಿದ್ದರೆ ಬರುತ್ತಿದ್ದೆ. ನೀವು ಬಂದಿದ್ದು, ಕರೆದುಕೊಂಡು ಹೋಗಿದ್ದು ತಪ್ಪಲ್ಲ. ಆದರೆ ಬೆಡ್ ರೂಮ್ ಹತ್ತಿರ ಬಂದಿರೋದು ತಪ್ಪು. ಅದು ಪ್ರೈವಸಿ ಜಾಗ. ಅಲ್ಲಿವರೆಗೂ ನೀವು ಬರಬಾರದಿತ್ತು. ದಿಸ್ ಈಸ್ ಟೂ ಮಚ್, ಇದು ಒಳ್ಳೆಯದಲ್ಲ ಸರ್” ಎಂದು ಅಲ್ಲು ಅರ್ಜುನ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
ಈ ಸುದ್ದಿಯನ್ನೂ ಓದಿ:Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್