Sunday, 1st December 2024

ಅಮರಿಂದರ್‌ ಸಿಂಗ್‌ – ಪಂಜಾಬ್‌ ಕಾಂಗ್ರೆಸ್‌ನ ನೂತನ ಮುಖ್ಯಸ್ಥ

ನವದೆಹಲಿ: ಪಂಜಾಬ್‌ ಕಾಂಗ್ರೆಸ್‌ನ ನೂತನ ಮುಖ್ಯಸ್ಥರನ್ನಾಗಿ ಅಮರಿಂದರ್‌ ಸಿಂಗ್‌ ಬ್ರಾರ್‌ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯಸಭೆಯ ಮಾಜಿ ಸದಸ್ಯ ಪ್ರತಾಪ್‌ ಸಿಂಗ್‌ ಬಾಜ್ವಾ ಅವರನ್ನು ಪಕ್ಷದ ಹೊಸ ಶಾಸಕಾಂಗ ನಾಯಕ ರಾಗಿ ನೇಮಕಗೊಂಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಂಜಾಬ್‌ ಕಾಂಗ್ರೆಸ್‌ ಪ್ರದೇಶ ಸಮಿತಿಯ ಅಧ್ಯಕ್ಷರನ್ನಾಗಿ ಅಮರಿಂದರ್‌ ಸಿಂಗ್‌ ಬ್ರಾರ್‌ ಅವರನ್ನು ಹಾಗೂ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಭರತ್‌ ಭೂಷಣ್‌ ಅಶು ಅವರನ್ನು ನೇಮಕ ಗೊಳಿಸಲಾಗಿದೆ.  ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪ್ರತಾಪ್‌ ಸಿಂಗ್‌ ಬಾಜ್ವಾ ಹಾಗೂ ಉಪನಾಯಕರಾಗಿ ರಾಜ್‌ ಕುಮಾರ್‌ ಚಬ್ಬೆವಾಲ್‌ ಅವರನ್ನು ನೇಮಕ ಮಾಡಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ರಾಜಾ ವಾರಿಂಗ್‌ ಅವರು ಗಿದ್ದರ್‌ಬಾಹಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಾಜ್ವಾ ಅವರು ಕ್ವಾದಿಯನ್‌ ಕ್ಷೇತ್ರ ದಿಂದ ಶಾಸಕರಾಗಿ ಗೆದ್ದು ಬಂದಿದ್ದರು.

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಕಾಂಗ್ರೆಸ್‌ ಮುಖ್ಯಸ್ಥನ ಸ್ಥಾನಕ್ಕೆ ನವಜೋತ್‌ ಸಿಂಗ್‌ ಸಿಧು ರಾಜೀನಾಮೆ ನೀಡಿದ್ದರು.