ಆದಾಗ್ಯೂ, ಮತ್ತೊಮ್ಮೆ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿತು. ಹಳೆಯ ಬೆಲೆಗಳಿಗೆ ಹೋಲಿಸಿದರೆ. ಹೊಸ ಬೆಲೆಗಳು ತೀವ್ರವಾಗಿ ಏರಿಕೆಗೊಂಡಿದ್ದು, ಈಗ ಹೆಚ್ಚು ಪಾವತಿಸಬೇಕಾಗುತ್ತದೆ.
ಅಮೆಜಾನ್ ಪ್ರೈಮ್ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಅಮೆಜಾನ್ ಭಾರತದಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವ ಯೋಜನೆಯ ಬೆಲೆಯನ್ನು ಹೆಚ್ಚಿಸಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವವು ಈಗ ಭಾರತದಲ್ಲಿ ಶೇಕಡಾ 67 ರಷ್ಟು ಹೆಚ್ಚಾಗಿದೆ. ಇದರೊಂದಿಗೆ, ಅಮೆಜಾನ್ ಪ್ರೈಮ್ ಪ್ರತಿ ತಿಂಗಳು ಮೂರು ತಿಂಗಳ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ.
ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಭಾರತದಲ್ಲಿ 2016 ರಲ್ಲಿ ಪ್ರಾರಂಭಿಸಲಾಯಿತು. ಆರಂಭಗೊಂಡಾಗಿನಿಂದ ಒಂದಲ್ಲ ಒಂದು ಹೊಸಹೊಸ ರೀತಿಯಲ್ಲಿ ಜನರನ್ನು ಗಮನಸೆಳೆಯುತ್ತಿದೆ. ಅಮೆಜಾನ್ ಪ್ರೈಮ್ ನ ವಾರ್ಷಿಕ ಯೋಜನೆಯ ಬೆಲೆ ಇನ್ನೂ ರೂ. ಅಂದರೆ 1,499 ರೂ.ಗಳು ಆಗಿದ್ದು ಒಂದು ವರ್ಷದ ಯೋಜನೆಯ ಬೆಲೆಯನ್ನು ಹೆಚ್ಚಿಸಲಾಗಿಲ್ಲ. ನೀವು ಪ್ರತಿ ತಿಂಗಳು ಮತ್ತು 3 ತಿಂಗಳ ಯೋಜನೆಗಳ ಬೆಲೆಗಳನ್ನು ನೋಡಿದರೆ, ಒಂದು ತಿಂಗಳ ಯೋಜನೆಯ ಬೆಲೆ 120 ರೂ ಮತ್ತು 3 ತಿಂಗಳ ಯೋಜನೆಯ ಬೆಲೆ 140 ರೂ. ಹೆಚ್ಚಳ ಮಾಡಲಾಗಿದೆ