Sunday, 15th December 2024

ಅಮೆಜಾನ್ ಇಂಡಿಯಾ, ಭಾರತೀಯ ರೈಲ್ವೆಯೊಂದಿಗೆ ಗ್ರಾಹಕರ ಪ್ಯಾಕೇಜುಗಳ ವೇಗದ ಚಲನೆಗೆ ರೈಲ್ವೆ ಜಾಲದ ಬಳಕೆ ಹೆಚ್ಚಿಸಲು ಒಡಂಬಡಿಕೆಗೆ ಸಹಿ

• ಭಾರತೀಯ ರೈಲ್ವೆಯೊಂದಿಗೆ ಅಮೆಜಾನ್ ಸಹಯೋಗವು ದೇಶದ ಮೂಲಸೌಕರ್ಯ ಮತ್ತು ಅರ್ಥವ್ಯವಸ್ಥೆಯ ಸ್ತಂಭವನ್ನು ಅನುಷ್ಠಾನ ಮತ್ತು ಆಧುನೀಕರಿಸುವ ಮೂಲಕ ವಿಕಸಿತ ಭಾರತ ಮತ್ತು ವಿಕಸಿತ ರೈಲು ಸಾಧನೆಯ ಸರ್ಕಾರದ ಗುರಿಯೊಂದಿಗೆ ಪೂರಕವಾಗಿದೆ
• ಇದು ಭಾರತದಾದ್ಯಂತ ಕೋಟ್ಯಂತರ ಉತ್ಪನ್ನಗಳನ್ನು ಗ್ರಾಹಕರಿಗೆ 1-ದಿನ ಮತ್ತು 2-ದಿನದಲ್ಲಿ ಪೂರೈಕೆ ಮಾಡುವ ಮೂಲಕ ಗ್ರಾಹಕರಿಗೆ ಈ ಹಬ್ಬದ ಋತುವಿಗೆ ಸಂತೋಷ ನೀಡಲು ಅಮೆಜಾನ್ ಇಂಡಿಯಾಗೆ ನೆರವಾಗುತ್ತದೆ.
• 2019ರಲ್ಲಿ ಭಾರತೀಯ ರೈಲ್ವೆಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ ರೈಲ್ವೆ ಲೇನುಗಳಲ್ಲಿ ಅಮೆಜಾನ್ ಇಂಡಿಯಾದ ಪಾರ್ಸಲ್ ಗಳ ಚಲನೆಯಲ್ಲಿ 15 ಪಟ್ಟು ಹೆಚ್ಚಳ ಕಂಡಿದೆ

ಅಮೆಜಾನ್ ಟ್ರಾನ್ಸ್ ಪೊರ್ಟೇಷನ್ ಸರ್ವೀಸಸ್ ಲಿಮಿಟೆಡ್ (ಅಮೆಜಾನ್ ಇಂಡಿಯಾ) ಮತ್ತು ಭಾರತೀಯ ರೈಲ್ವೆ ಸಚಿವಾಲಯ ಈ ಎರಡರ ನಡುವೆ ಪ್ರಸ್ತುತದ ಪಾಲುದಾರಿಕೆಯನ್ನು ಮತ್ತಷ್ಟು ದೃಢಗೊಳಿಸಲು ಮತ್ತು ಭಾರತೀಯ ರೈಲ್ವೆಯ ಮೂಲಕ ಅಮೆಜಾನ್ ಇಂಡಿಯಾ ಪ್ಯಾಕೇಜುಗಳ ವಿಶ್ವಾಸಾರ್ಹ ಮತ್ತು ವೇಗದ ಸಾಗಣೆಗೆ ಇಂದು ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿವೆ. ಈ ಒಡಂಬಡಿಕೆಯಲ್ಲದೆ ಅಮೆಜಾನ್ ಇಂಡಿಯಾ ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಅದು ಒಂದು ಮೂಲ ತಾಣಕ್ಕೆ ಹಬ್ ಅಂಡ್ ಸ್ಪೋಕ್ ಮಾಡೆಲ್ ರೂಪಿಸಲು ಪ್ರಯತ್ನಿಸುತ್ತಿದೆ ಮತ್ತು ಅದರಿಂದ ಕಲಿಕೆಯನ್ನು ತನ್ನ ಜಾಲದಾದ್ಯಂತ ವಿಸ್ತರಿಸಲು ಅಗತ್ಯಗಳನ್ನು ವ್ಯಾಖ್ಯಾನಿಸಲಿದೆ.

ಈ ಯೋಜನೆಯು ಮೊದಲ ಹಾಗೂ ಕೊನೆಯ ಹಂತದ ಅಗತ್ಯಗಳು, ಸಾಗಣೆ ಸಮಯಗಳು, ವೆಚ್ಚದ ಆಯ್ಕೆಗಳು ಮತ್ತು ನೀತಿಯ ಸನ್ನದ್ಧಗೊಳಿಸುವ ಮೂಲಕ ರೈಲ್ವೆಯಲ್ಲಿ ಪಾರ್ಸೆಲ್ ಪ್ರಮಾಣವನ್ನು ಹೆಚ್ಚಿಸಲಿದೆ. ಅಮೆಜಾನ್ ಇಂಡಿಯಾ ಕೂಡಾ ರೈಲ್ವೆ ಮೂಲಕ ವೇಗದ ಮತ್ತು ವಿಶ್ವಾಸಾರ್ಹ ಪಾರ್ಸಲ್ ಲಾಜಿಸ್ಟಿಕ್ಸ್ ಅಗತ್ಯಗಳಿಗೆ ಶಿಫಾರಸುಗಳನ್ನು ನೀಡುತ್ತದೆ. ಈ ಅಭಿವೃದ್ಧಿಯು ಹೆಚ್ಚು ಸ್ಥಿರವಾದ ಕಾರ್ಯಾಚರಣೆಗಳ ಸಕಾಲಿಕತೆ ಹೊಂದಿದ್ದು ಇ-ಕಾಮರ್ಸ್ ವಲಯದ ಅಗತ್ಯಗಳನ್ನು ಪೂರೈಸಲಿದೆ.

“ಭಾರತೀಯ ರೈಲ್ವೆಯೊಂದಿಗೆ ನಮ್ಮ ಸಹಯೋಗವು ಈ ಮಹತ್ತರ ಸಂಸ್ಥೆಯನ್ನು ಭಾರತದ ಆರ್ಥಿಕ ಪ್ರಗತಿಯಲ್ಲಿ ತೊಡಗಿಸುವ ಸರ್ಕಾರದ ಧ್ಯೇಯೋದ್ದೇಶಕ್ಕೆ ಪೂರಕವಾಗಿದೆ. ಇದು ನಮ್ಮ ಗ್ರಾಹಕರಿಗೆ ಭಾರತ ದಾದ್ಯಂತ ಸರಿಸಾಟಿ ಇರದ ವೇಗ ಮತ್ತು ವಿಶ್ವಾಸಾರ್ಹ ಡೆಲಿವರಿಗಳನ್ನು ನೀಡಲು ನಮ್ಮ ಆದ್ಯತೆಯನ್ನು ಪ್ರತಿಫಲಿಸುತ್ತದೆ. 2019ರಿಂದಲೂ ನಾವು ಅಮೆಜಾನ್ ನ ಇ-ಕಾಮರ್ಸ್ ಪರಿಣಿತಿಯನ್ನು ಭಾರತೀಯ ರೈಲ್ವೆಯ ವಿಸ್ತಾರ ಮತ್ತು ವಿಶ್ವಾಸಾರ್ಹ ಜಾಲದೊಂದಿಗೆ ಸಂಯೋಜಿಸುವ ಆವಿಷ್ಕಾರಕ ಲಾಜಿಸ್ಟಿಕ್ಸ್ ಮಾದರಿಗೆ ಸಹಯೋಗ ಹೊಂದಿದ್ದೇವೆ. ಇದು ದೇಶಾದ್ಯಂತ ಕೋಟ್ಯಂತರ ಉತ್ಪನ್ನಗಳ ವೇಗದ ಪೂರೈಕೆ ಸಾಧ್ಯವಾಗಿಸುತ್ತದೆ, ನಾವು ನಮ್ಮ ಗ್ರಾಹಕರಿಗೆ ಉತ್ತಮವಾಗಿ ಸೇವೆ ಒದಗಿಸಲು ಭಾರತೀಯ ರೈಲ್ವೆಯೊಂದಿಗೆಹೆಚ್ಚು ಆವಿಷ್ಕಾರಗಳನ್ನು ಮುನ್ನಡೆಸಲು ಬದ್ಧರಾಗಿದ್ದೇವೆ” ಎಂದು ಅಮೆಜಾನ್ ಇಂಡಿಯಾದ ಆಪರೇಷನ್ಸ್ ಉಪಾಧ್ಯಕ್ಷ ಅಭಿನವ್ ಸಿಂಗ್ ಹೇಳಿದರು.

“ಭಾರತೀಯ ರೈಲ್ವೆಯೊಂದಿಗೆ ಒಡಂಬಂಡಿಕೆಗೆ ಸಹಿ ಹಾಕಿದ್ದಕ್ಕೆ ನಾನು ಅಮೆಜಾನ್ ಅನ್ನು ಪ್ರಶಂಸಿಸುತ್ತೇನೆ. ಈ ಸಹಯೋಗ ಮತ್ತು ಪಾಲುದಾರಿಕೆಯು ರೈಲ್ವೆಗೆ ಇ-ಕಾಮರ್ಸ್ ಉದ್ಯಮಗಳ ಅಗತ್ಯವನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದಕ್ಕೆ ತಕ್ಕಂತೆ ಸಾರಿಗೆಯನ್ನು ಯೋಜಿಸಲು ಮತ್ತಷ್ಟು ನೆರವಾಗುತ್ತದೆ. ಈ ಒಡಂಬಡಿಕೆಯು ಇ-ಕಾಮರ್ಸ್ ಸರಕುಗಳನ್ನು ಭಾರತೀಯ ರೈಲ್ವೆಯ ಮೂಲಕ ಸಾಗಣೆಯನ್ನು ಹೆಚ್ಚಿಸಲು ಪ್ರಮುಖ ಹೆಜ್ಜೆಯಾಗಿದೆ. ನಾನು ಇ-ಕಾಮರ್ಸ್ ವಲಯಕ್ಕೆ ರೈಲು ಸಾರಿಗೆಯ ದಕ್ಷತೆ ಮತ್ತು ಸುಸ್ಥಿರತೆಯನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಲಾಜಿಸ್ಟಿಕ್ಸ್ ಅಗತ್ಯಗಳನ್ನು ಸುಸೂತ್ರಗೊಳಿಸಿಕೊಳ್ಳಲು ಉತ್ತೇಜಿಸುತ್ತೇನೆ. ಭಾರತೀಯ ರೈಲ್ವೆಯು ಹಲವು ಪಾರ್ಸಲ್ ಸೇವೆಗಳನ್ನು ಪ್ರಾರಂಭಿಸಿದೆ ಅಲ್ಲದೆ ವರ್ಚುಯಲ್ ಅಗ್ರಿಗೇಷನ್ ಪ್ಲಾಟ್ ಫಾರಂ(ವಿ.ಎ.ಪಿ.) ಮೂಲಕ ಪಾರ್ಸೆಲ್ ಪೂರೈಕೆಯನ್ನು ಸರಳಗೊಳಿಸಿದೆ ಮತ್ತು ರೈಲು ಅಳವಡಿಕೆ ಉತ್ತೇಜಿಸುತ್ತಿದೆ ಮತ್ತು ಆದ್ದರಿಂದ ನಾನು ಇ-ಕಾಮರ್ಸ್ ಉದ್ಯಮಕ್ಕೆ ಈ ಸೌಲಭ್ಯವನ್ನು ಪರಸ್ಪರರ ಲಾಭಕ್ಕೆ ಬಳಸಿಕೊಳ್ಳಲು ಕೋರುತ್ತೇನೆ” ಎಂದು ಭಾರತೀಯ ರೈಲ್ವೆಯ ರೈಲ್ವೆ ಬೋರ್ಡ್ (ಆಪರೇಷನ್ಸ್ ಅಂಡ್ ಬಿಸಿನೆಸ್ ಡೆವಲಪ್ ಮೆಂಟ್) ಸದಸ್ಯ ರವೀಂದರ್ ಗೋಯಲ್ ಹೇಳಿದರು.

ಅಮೆಜಾನ್ ಇಂಡಿಯಾ, ಭಾರತೀಯ ರೈಲ್ವೆಯೊಂದಿಗೆ 2019ರಲ್ಲಿ ಸಹಯೋಗ ಪ್ರಾರಂಭಿಸಿತು ಮತ್ತು ಮುಂಬೈ-ದೆಹಲಿ ಮಾರ್ಗದಲ್ಲಿ ರಾಜಧಾನಿಯಲ್ಲಿ ರೈಲು ಮೂಲಕ ಪಾರ್ಸಲ್ ವ್ಯಾಗನ್ ಗಳನ್ನು ಕೊಂಡೊಯ್ಯುವ ವೇಗದ ಸಾರಿಗೆ ನಿರ್ಮಿಸುವ ಭಾರತದ ಮೊದಲ ಇ-ಕಾಮರ್ಸ್ ವಲಯದ ಕಂಪನಿಯಾಯಿತು. ಕಳೆದ 5 ವರ್ಷಗಳಿಗೂ ಮೇಲ್ಪಟ್ಟು ಅಮೆಜಾನ್ ತನ್ನ ಕಾರ್ಯಾಚರಣೆಗಳನ್ನು 2019ರಲ್ಲಿ ಒಂದು ರೈಲಿನಿಂದ 2024ರಲ್ಲಿ 120+ ರೈಲುಗಳಿಗೆ ವಿಸ್ತರಿಸಿದ್ದು 130 ಇಂಟರ್ ಸಿಟಿ ಮಾರ್ಗಗಳು 91 ವಿಶಿಷ್ಟ ತಾಣಗಳನ್ನು ರೈಲ್ವೆ ಮೂಲಕ ಕಾರ್ಯಾಚರಣೆ ಮಾಡುತ್ತಿದೆ. ಇದು 2019ರಲ್ಲಿ ಭಾರತೀಯ ರೈಲ್ವೆಯೊಂದಿಗೆ ಕೆಲಸ ಪ್ರಾರಂಭಿಸಿದ ನಂತರ ರೈಲ್ವೆ ಲೇನುಗಳ ಅಮೆಜಾನ್ ಪಾರ್ಸಲ್ ಗಳ ಚಲನೆಯಲ್ಲಿ 15 ಪಟ್ಟು ಹೆಚ್ಚಳ ಕಂಡಿದೆ. ಭಾರತೀಯ ರೈಲ್ವೆಯೊಂದಿಗೆ ಅಮೆಜಾನ್ ಇಂಡಿಯಾ ಸಹಯೋಗವು ಕಂಪನಿಗೆ ಭಾರದಾದ್ಯಂತ ಗ್ರಾಹಕರಿಗೆ 1 ದಿನ ಮತ್ತು 2 ದಿನದ ಡೆಲಿವರಿ ಭರವಸೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

2023ರಲ್ಲಿ ಅಮೆಜಾನ್ ಇಂಡಿಯಾ ಭಾರತೀಯ ರೈಲ್ವೆಯೊಂದಿಗೆ ಡೆಡಿಕೇಟೆಡ್ ಫ್ರೀಟ್ ಕಾರಿಡಾರ್ ಗಳನ್ನು ಅನುಷ್ಠಾನಗೊಳಿಸಿದ ಮೊದಲ ಇ-ಕಾಮರ್ಸ್ ಕಂಪನಿಯಾಗಿದ್ದು ಅದನ್ನು ರೈಲು ಜಾಲದ ಒತ್ತಡ ಕಡಿಮೆ ಮಾಡಲು, ಫ್ರೀಟ್ ಟ್ರೈನುಗಳ ಸರಾಸರಿ ವೇಗ ಹೆಚ್ಚಿಸಲು, ಹೆವಿ ಹಾಲ್ ಟ್ರೈನ್ ಗಳ ಕಾರ್ಯಾಚರಣೆ ಸಾಧ್ಯವಾಗಿಸಲು, ಬಂದರುಗಳು ಮತ್ತು ಕೈಗಾರಿಕಾ ಪ್ರದೇಶಗಳ ಸಂಪರ್ಕದ ಮೂಲಕ ವೇಗದ ಸರಕು ಸಾಗಣೆ ಮಾಡಲು ಮತ್ತು ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚ ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆ ಮತ್ತು ಅಮೆಜಾನ್ ನಡುವೆ ಸಹಯೋಗವು ಪ್ರಧಾನಮಂತ್ರಿಗಳ ಬಹುಸಾರಿಗೆ ಬಳಕೆ ಹೆಚ್ಚಿಸುವ ಮತ್ತು ರೈಲ್ವೆಯನ್ನು ಆರ್ಥಿಕ ಹಾಗೂ ಸುಸ್ಥಿರ ಮಾದರಿ ಸಾರಿಗೆಯಾಗಿ ಬಳಸುವುದು ಮತ್ತು `ವಿಕಸಿತ ಭಾರತ ವಿಕಸಿತ ರೈಲು’ ಧ್ಯೇಯಕ್ಕೆ ಕೊಡುಗೆ ನೀಡುತ್ತದೆ.