Wednesday, 9th October 2024

ಮದ್ಯ ನೀತಿ ಹಗರಣ: ಅಮಿತ್ ಅರೋರಾ ಬಂಧನ

ವದೆಹಲಿ: ವಿವಾದಿತ ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಡ್ಡಿ ರಿಟೇಲ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಅಮಿತ್ ಅರೋರಾ ಅವರನ್ನು ಬುಧವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರನ್ನು ಇಡಿ ಬಂಧಿಸಲಾಗಿದೆ. ಮದ್ಯದ ಉದ್ಯಮಿ ಸಮೀರ್ ಮಹಂದ್ರು ಅವರನ್ನು ಸೆಪ್ಟೆಂಬರ್ 27ರಂದು ಇಡಿ ವಿಚಾರ ಣೆಯ ನಂತರ ಬಂಧಿಸಿತ್ತು.

ಅಮಿತ್ ಅರೋರಾ, ದಿನೇಶ್ ಅರೋರಾ ಮತ್ತು ಅರ್ಜುನ್ ಪಾಂಡೆ ಅವರು ಸಿಸೋಡಿಯಾ ಅವರ ಆಪ್ತ ಸಹಚರರಾಗಿದ್ದಾರೆ. ಆರೋಪಿಗಳು ಮನೀಶ್‌ ಸಿಸೋಡಿಯಾಗೆ ಮದ್ಯ ಪರವಾನಗಿದಾರರಿಂದ ಸಂಗ್ರಹಿಸಿದ ಹಣದ ಲಾಭವನ್ನು ನಿರ್ವಹಿಸುವಲ್ಲಿ ಮತ್ತು ವಸೂಲಿ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

ಎಎಪಿ ಸಚಿವ ಮನೀಶ್‌ ಸಿಸೋಡಿಯಾ ಮತ್ತು ಇತರ ಆರೋಪಿಗಳು ದೆಹಲಿ ಅಬಕಾರಿ ನೀತಿ 2021-22 ಕ್ಕೆ ಸಂಬಂಧಿಸಿದಂತೆ ಟೆಂಡರ್ ನಂತರ ಪರವಾನಗಿದಾರರಿಗೆ ಅನೇಖ ಅನುಕೂಲ ಗಳನ್ನು ಮಾಡುವ ಉದ್ದೇಶದಿಂದ ಪ್ರಾಧಿಕಾರದ ಅನುಮೋದನೆಯಿಲ್ಲದೆ ಶಿಫಾರಸು ಮಾಡಿದ್ದಾರೆ ಮತ್ತು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.