Sunday, 15th December 2024

ಸ್ವಾಮಿ ವಿವೇಕಾನಂದರಿಗೆ ಗೌರವ ನಮನ ಸಲ್ಲಿಸಿದ ಸಚಿವ ಅಮಿತ್‌ ಶಾ

ಕೊಲ್ಕೋತಾ: ಭಾರತ ಮಾತೆಯ ಅತಿ ಮಹಾನ್ ಪುತ್ರ ಸ್ವಾಮಿ ವಿವೇಕಾನಂದ, ದೇಶದ ಪುನರುತ್ಥಾನಕ್ಕೆ ತಮ್ಮ ಜೀವನವನ್ನೆ ಮುಡುಪಾಗಿಟ್ಟಿವರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯಕ್ಕೆ ಎರಡು ದಿನಗಳ ಪ್ರವಾಸದ ವೇಳೆ ರಾಮಕೃಷ್ಣ ಮಿಷನ್ ಗೆ ಭೇಟಿ ನೀಡಿದ್ದ ಅಮಿತ್ ಶಾ, ಸ್ವಾಮಿ ವಿವೇಕಾನಂದರಿಗೆ ಗೌರವ ನಮನ ಸಲ್ಲಿಸಿದರು.

ರಾಮಕೃಷ್ಣ ಮಿಷನ್ ನಲ್ಲಿ ಸಮಯ ಕಳೆಯುವುದು ಹಾಗೂ ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಲು ಅವಕಾಶ ಸಿಕ್ಕಿರುವುದು ಅದೃಷ್ಟ ಎಂದು ಹೇಳಿದ್ದಾರೆ. ರಾಮಕೃಷ್ಣ ಮಿಷನ್ ಭೇಟಿಯ ನಂತರ ಅಮಿತ್ ಶಾ ಮದಿನಿಪುರದಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.