Sunday, 15th December 2024

ಅಮಿತ್ ಶಾ ಚೆನ್ನೈ ಭೇಟಿ ಇಂದು, ‘ಗೋಬ್ಯಾಕ್ ಅಮಿತ್ ಶಾ’ ಹ್ಯಾಷ್ ಟ್ಯಾಗ್ ವೈರಲ್

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಚೆನ್ನೈಗೆ ಭೇಟಿ ನೀಡಲಿದ್ದಾರೆ. ‌ಆದರೆ, ಇದೀಗ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ‘ಗೋಬ್ಯಾಕ್ ಅಮಿತ್ ಶಾ’ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

ಕೇಂದ್ರದ ಮೋದಿ ಸರಕಾರದ ಸಚಿವರುಗಳಿಗೆ ಈ ರೀತಿಯ ಟ್ರೆಂಡಿಂಗ್ ಹೊಸ ವಿಚಾರವೇನೂ ಇಲ್ಲ. ಪ್ರಧಾನಿ ಮೋದಿ ತಮಿಳು ನಾಡು ಅಥವಾ ಕೇರಳಕ್ಕೆ ಭೇಟಿ ನೀಡಿದಾಗ, ಕಪ್ಪುಪಟ್ಟಿ ಪ್ರದರ್ಶನ ಮತ್ತು ಸಾಮಾಜಿಕ ತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು.

ಮುಂದಿನ ವರ್ಷ ತಮಿಳುನಾಡಿನ ಅಸೆಂಬ್ಲಿ ಚುನಾವಣೆ ಎದುರಾಗುತ್ತಿರುವುದರಿಂದ ಶಾ ಅವರ ಭೇಟಿ ಮಹತ್ವ ಪಡೆದಿದೆ. ಶಾ ಈ ಭೇಟಿಯ ವೇಳೆ, ಹಲವು ಸರಕಾರೀ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಮುಖಂಡರ ಜೊತೆಯೂ ಸಭೆ ನಡೆಯಲಿದೆ.

ಹೊಸ ಪಕ್ಷ ಕಟ್ಟುವ ತಯಾರಿಯಲ್ಲಿರುವ ಮಾಜಿ ಸಿಎಂ ಕರುಣಾನಿಧಿಯವರ ಪುತ್ರ ಎಂ.ಕೆ.ಅಳಗಿರಿಯನ್ನೂ ಅಮಿತ್ ಶಾ ಭೇಟಿ ಯಾಗುವ ಸಾಧ್ಯತೆಯಿದೆ.