Friday, 22nd November 2024

ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಸ್ಫೋಟ

ಪಂಜಾಬ್: ಅಮೃತಸರ ಶ್ರೀ ಹರ್ಮಂದಿರ್ ಸಾಹಿಬ್ ಹೊರಗೆ ಶನಿವಾರ ತಡರಾತ್ರಿ ಸ್ಫೋಟ ಸಂಭವಿಸಿದೆ.

ಹೊರಗಿನಿಂದ ಬಂದ ಯಾತ್ರಾರ್ಥಿಗಳು ಮತ್ತು ದರ್ಬಾರ್ ಸಾಹಿಬ್ ಹೊರಗೆ ಮಲಗಿದ್ದ ವರು ದಿಢೀರ್ ಸ್ಫೋಟದ ಶಬ್ದ ಕೇಳಿ ಭಯಭೀತರಾದರು. ಕೆಲವರಿಗೆ ಸಣ್ಣಪುಟ್ಟ ಗಾಯ ಗಳಾಗಿವೆ.

ನಮಗೆ ಭಾರಿ ಸ್ಫೋಟವಾದ ಶಬ್ದ ಕೇಳಿಸಿತು. ಕೆಲವು ಕಲ್ಲುಗಳ ಚೂರುಗಳು ನಮಗೆ ತಗುಲಿದ್ದು, ಕೆಲವರು ಗಾಯಗೊಂಡರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದರು” ಎಂದು ಗೋಲ್ಡನ್ ಟೆಂಪಲ್ ಬಳಿ ಮಲಗಿದ್ದ ಮತ್ತು ಹೊರಗಿನಿಂದ ಬಂದ ಯಾತ್ರಾರ್ಥಿಗಳು ಮಾಹಿತಿ ನೀಡಿದ್ದಾರೆ.

“ಯಾವುದೇ ಸ್ಫೋಟವಾಗಿಲ್ಲ. ದರ್ಬಾರ್ ಸಾಹಿಬ್ ಹೊರಭಾಗದ ಪಾರ್ಕಿಂಗ್ ಸ್ಥಳದಲ್ಲಿ ಬೃಹತ್ ಕನ್ನಡಿ ಇತ್ತು, ಅದು ಮುರಿದುಬಿದ್ದಿದೆ. ಪಾರ್ಕಿಂಗ್ ಪಕ್ಕದಲ್ಲಿ ರೆಸ್ಟೋರೆಂಟ್ ಇದೆ. ಅವರ ಚಿಮಣಿ ತುಂಬಾ ಬಿಸಿಯಾಗಿದ್ದರ ಪರಿಣಾಮ ಗಾಜು ಒಡೆದು ದೊಡ್ಡ ಸ್ಫೋಟ ಸಂಭವಿಸಿದೆ. ಬೇರೇನೂ ಇಲ್ಲ, ಭಯಪಡುವ ಅಗತ್ಯವಿಲ್ಲ ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ಆಗಸ್ಟ್​ ತಿಂಗಳಲ್ಲಿ ಅಮೃತಸರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ವಾಹನದ ಕೆಳಗೆ ಬಾಂಬ್ ಇಡಲಾಗಿತ್ತು.

ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್ ಇನ್ಸ್‌ಪೆಕ್ಟರ್ ದಿಲ್ಬಾಗ್ ಸಿಂಗ್ ಅವರ ನಿವಾಸದ ಬಳಿ ನಿಲ್ಲಿಸಿದ್ದ ವಾಹನದ ಕೆಳಗೆ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿತ್ತು.