ಬೆಲೆ ಪರಿಷ್ಕರಣೆ ನಂತರ ಅಮುಲ್ ಹಾಲಿನ ಪ್ಯಾಕೆಟ್‌ನ ಹೊಸ ದರಗಳು ಲೀಟರ್‌ಗೆ 66 ರೂ.(ಗೋಲ್ಡ್), ಅಮುಲ್ ತಾಜಾ 1 ಲೀಟರ್ ಹಾಲಿನ ಬೆಲೆ 54 ರೂ., ಹಸುವಿನ ಹಾಲಿನ 1 ಲೀಟರ್ ಬೆಲೆ 56 ರೂ. ಮತ್ತು ಅಮುಲ್ ಎ2 ಎಮ್ಮೆ ಹಾಲಿನ ಬೆಲೆ ಲೀಟರ್ ಗೆ 70 ರೂ. ಆಗಲಿದೆ ಎಂದು ಕಂಪನಿ ತಿಳಿಸಿದೆ. ಈ ದರಗಳು ಇಂದಿನಿಂದಲೇ ಜಾರಿಯಾಗಲಿವೆ.
ವರ್ಷದಲ್ಲಿ ಅಮುಲ್ ಹಾಲಿನ ದರದಲ್ಲಿ ಮೊದಲ ಏರಿಕೆ ಮಾಡಿದೆ. ಕಳೆದ ವರ್ಷ 3 ಬಾರಿ ಹಾಲಿನ ದರ ಹೆಚ್ಚಿಸಲಾಗಿತ್ತು. ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಹೆಚ್ಚಿಸಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ- ಎನ್‌ಸಿಆರ್ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ. ದೆಹಲಿ-ಎನ್‌ಸಿಆರ್‌ನ ಪ್ರಮುಖ ಹಾಲು ಪೂರೈಕೆದಾರರಲ್ಲಿ ಒಂದಾದ ಅಮುಲ್, ದಿನಕ್ಕೆ 30 ಲಕ್ಷ ಲೀಟರ್‌ಗಿಂತ ಹೆಚ್ಚಿನ ಪ್ರಮಾಣದ ಹಾಲು ಪೂರೈಸುತ್ತದೆ.
ಕ್ರೀಮ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಏರಿಸಿ 66 ರೂ.ಗೆ ಹೆಚ್ಚಿಸಿದೆ. ಟೋನ್ಡ್ ಹಾಲಿನ ದರವನ್ನು ಲೀಟರ್‌ಗೆ 51 ರೂ.ನಿಂದ 53 ರೂ.ಗೆ ಪರಿಷ್ಕರಿಸಿದೆ.