Saturday, 14th December 2024

ಚಿತ್ರಾ ರಾಮಕೃಷ್ಣ ಸಲಹೆಗಾರ ಆನಂದ್‌ ಸುಬ್ರಮಣಿಯನ್‌ ಬಂಧನ

ಚೆನ್ನೈ: ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದ ಆನಂದ್‌ ಸುಬ್ರಮಣಿಯನ್‌ ಅವರನ್ನು ಸಿಬಿಐ ಬಂಧಿಸಿದೆ.

ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ (ಎನ್‌ಎಸ್‌ಇ) ಹಗರಣದ ಸಂಬಂಧ ಎನ್‌ಎಸ್‌ಇನ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆಗಿದ್ದ ಆನಂದ್‌ ಸುಬ್ರಮಣಿಯನ್‌ ಅವರನ್ನು ಬಂಧಿಸಲಾಗಿದೆ.

ಹೈ ಫ್ರೀಕ್ವೆನ್ಸಿ ಟ್ರೇಡರ್‌ಗಳಿಗೆ ವಿನಿಮಯ ಕೇಂದ್ರದ ನೆಟ್‌ವರ್ಕ್ ಸರ್ವರ್‌ಗಳಿಗೆ ಅಕ್ರಮ ಪ್ರವೇಶ ನೀಡಲಾಗಿ ದೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಈ ಸಂಬಂಧ ಆನಂದ್‌ ಸುಬ್ರಮಣಿಯನ್‌ ರನ್ನು ಬಂಧಿಸಿದ್ದಾರೆ.

ಸುಬ್ರಮಣಿಯನ್ ಅವರು 2013ರ ಏಪ್ರಿಲ್ 1 ರಿಂದ ಮುಖ್ಯ ಕಾರ್ಯತಂತ್ರ ಸಲಹೆಗಾರರಾಗಿದ್ದರು. ನಂತರ 2015ರ ಏಪ್ರಿಲ್ 1 ರಿಂದ ಅಕ್ಟೋಬರ್ 21, 2016 ರವರೆಗೆ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರಿಗೆಸಲಹೆಗಾರರಾಗಿ ಮರು ನೇಮಕಗೊಂಡಿದ್ದರು.

ಸಿಬಿಐ ಇತ್ತೀಚೆಗೆ ಚಿತ್ರಾ ರಾಮಕೃಷ್ಣ, ಆನಂದ್ ಸುಬ್ರಮಣಿಯನ್ ಮತ್ತು ರವಿ ನಾರಾಯಣ್ ಅವರ ವಿಚಾರಣೆ ಆರಂಭಿಸಿತ್ತು.