Thursday, 12th December 2024

ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ ಜೂ.29ರಿಂದ ಆರಂಭ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆ ಸಮಾರಂಭ ಜೂ.29ರಿಂದ ನವಜೋಡಿಗಳ ಅದ್ಧೂರಿ ವಿವಾಹ ಸಮಾರಂಭ ಆರಂಭಗೊಳ್ಳಲಿದೆ.

ಈ ಕಾರ್ಯಕ್ರಮಕ್ಕೆ ಹೆಸರಾಂತ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.

ಜೂ.29ರಂದು ವಿಶೇಷ ಪೂಜೆ ನೆರವೇರಿಸುವ ಮೂಲಕ ವಿವಾಹ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿರುವ ಅಂಬಾನಿ ದಂಪತಿಗಳು, ತಮ್ಮ ಮುಂಬೈ ನಿವಾಸದಲ್ಲಿಯೇ ಮದುವೆ ಶಾಸ್ತ್ರಗಳನ್ನು ಈಡೇರಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಕುಟುಂಬದ ಅತ್ಯಾಪ್ತರೊಬ್ಬರು ಮಾಹಿತಿ ಹಂಚಿಕೊಂಡಿ ದ್ದಾರೆ.

ಅದ್ಧೂರಿ ವಿವಾಹ ಮಹೋತ್ಸವಕ್ಕೆ ಈಗಾಗಲೇ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಫ್ಯಾಷನ್ ಸ್ಟೈಲಿಸ್ಟ್‌ಗಳಾದ ರಿಯಾ ಕಪೂರ್ ಮತ್ತು ಶಲೀನಾ ನಥಾನಿ ವಧು ಮತ್ತು ವರ ಹೇಗೆ ಕಾಣಿಸಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಇಬ್ಬರ ಅಂದ-ಚೆಂದ ಹೆಚ್ಚಿಸಲು ಮುಂದಾಗಿದ್ದಾರೆ. ಇನ್ನು ನವಜೋಡಿಯ ಉಡುಪುಗಳನ್ನು ಪ್ರಸಿದ್ಧ ವಿನ್ಯಾಸಕರಾದ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ವಿವಾಹ ನೆರವೇರಲಿದ್ದು, ಈವೆಂಟ್‌ಗಳಲ್ಲಿ ಜು.12 ರಂದು ‘ಶುಭ ವಿವಾಹ’, ಜುಲೈ.13 ‘ಶುಭ ಆಶೀರ್ವಾದ್’ ಮತ್ತು ಜು.14 ರಂದು ‘ಮಂಗಳ ಉತ್ಸವ’ ಮತ್ತು ಮದುವೆಯ ಆರತಕ್ಷತೆ ಕಾರ್ಯಕ್ರಮಗಳ ಸೇರಿವೆ.