Sunday, 15th December 2024

21ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಟ್ಟ ಪ್ರಧಾನಿ

ನವದೆಹಲಿ: ಇಂದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಬಾಷ್ ಚಂದ್ರ ಬೋಸ್ ಅವರ 126ನೇ ಜನ್ಮಜಯಂತಿ. ಕೇಂದ್ರ ಸರ್ಕಾರ 2021ರಲ್ಲಿ ಜನವರಿ 23ನ್ನು ಪರಾಕ್ರಮ ದಿವಸ ಎಂದು ಘೋಷಿಸಿ ಆಚರಿಸಿಕೊಂಡು ಬರುತ್ತಿದೆ.
ಪರಾಕ್ರಮ ದಿವಸ ಅಂಗವಾಗಿ 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಅಂಡ ಮಾನ್ ನಿಕೋಬಾರ್ ನ ಅತಿದೊಡ್ಡ ಹೆಸರು ಇಡದಿರುವ ದ್ವೀಪಗಳಿಗೆ ಹೆಸರಿಡುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಅನಾವರಣಗೊಳಿಸಿದರು.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ಅತಿದೊಡ್ಡ ಹೆಸರಿಡದ ದ್ವೀಪಗಳಿಗೆ ಹೆಸರಿಡುವ ಸಮಾರಂಭ ದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಸುಬೇದಾರ್ ಮೇಜರ್ ಸಂಜಯ್ ಕುಮಾರ್ ಮತ್ತು ಸುಬೇದಾರ್ ಮೇಜರ್ ಯೋಗೇಂದ್ರ ಸಿಂಗ್ ಯಾದವ್ (ನಿವೃತ್ತ) ಸೇರಿದಂತೆ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಈ ದ್ವೀಪಗಳಿಗೆ ಇಡಲಾಗಿದೆ. ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಹೊಸ ಹೆಸರುಗಳನ್ನು ಪಡೆದಿರುವ 21 ದ್ವೀಪಗಳ ಹೆಸರುಗಳಲ್ಲಿ ಹಲವು ಸಂದೇಶಗಳು ಅಡಕವಾಗಿವೆ. ಏಕ್ ಭಾರತ್, ಶ್ರೇಷ್ಠ ಭಾರತ್; ಈ ಸಂದೇಶ ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಬಿಂಬಿಸುತ್ತದೆ ಎಂದರು.
ವೀರ ಸಾವರ್ಕರ್ ಮತ್ತು ದೇಶಕ್ಕಾಗಿ ಹೋರಾಡಿದ ಅನೇಕ ವೀರರು ಅಂಡಮಾನ್ನ ಈ ನೆಲದಲ್ಲಿ ಬಂಧಿತರಾಗಿದ್ದರು.