ಮುಂಬೈ: ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್, ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ಕೋರಿ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿಆರ್‌ಪಿಸಿ ಕಾಯ್ದೆ ಸೆಕ್ಷನ್ 167ರ ಅನ್ವಯ ಜಾಮೀನು ಮಂಜೂರು ಮಾಡಬೇಕು ಎಂದೂ ಮನವಿ ಮಾಡಿ ದ್ದಾರೆ. ನಿಯಮದ ಪ್ರಕಾರ, 60 ದಿನದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದಿದ್ದರೆ ಅಥವಾ ಅದನ್ನು ಕೋರ್ಟ್ ಪರಿಗಣಿಸದೇ ಇದ್ದರೆ ಜಾಮೀನು ನೀಡಲು ಅವಕಾಶವಿದೆ.
ಜಾರಿ ನಿರ್ದೇಶನಾಲಯವು ದೇಶಮುಖ್ ಅವರನ್ನು ನವೆಂಬರ್ 2, 2021ರಂದು ಬಂಧಿಸಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈಗ ಸಿಆರ್‌ಪಿಸಿ ಸೆಕ್ಷನ್ 167ರ ಅನ್ವಯ ಜಾಮೀನು ಕೋರಿ ವಕೀಲ ಅನಿಕೇತ್ ನಿಕ್ಕಂ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವ ಮುನ್ನ ವಿಶೇಷ ಕೋರ್ಟ್ ಇ.ಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ನಿಯಮಾನುಸಾರ ನಿಗದಿತ ಅವಧಿಯಲ್ಲಿ ಪರಿಗಣಿಸಿಲ್ಲ.