ಮುಂಬೈ: ಪತ್ರಕರ್ತ ಮತ್ತು ಬರಹಗಾರ ಅನಿಲ್ ಧಾರ್ಕರ್ ಅವರು ನಿಧನರಾದರು.
ಪ್ರತಿ ವರ್ಷ ನವೆಂಬರ್‌ನಲ್ಲಿ ನಡೆಯುವ ಮುಂಬೈ ಅಂತರರಾಷ್ಟ್ರೀಯ ಸಾಹಿತ್ಯ ಉತ್ಸವ (ಮುಂಬೈ ಲಿಟರೇಚರ್ ಫೆಸ್ಟ್) ದ ಸ್ಥಾಪಕ ಮತ್ತು ನಿರ್ದೇಶಕರಾಗಿದ್ದ ಧಾರ್ಕರ್ ಅವರು ಲಿಟರೇಚರ್ ಲೈವ್ ಸ್ಥಾಪಕ ಮತ್ತು ನಿರ್ದೇಶಕರಾಗಿದ್ದರು.
ದಕ್ಷಿಣ ಮುಂಬೈನಲ್ಲಿ ಆಕಾಶವಾಣಿ ಸಭಾಂಗಣವನ್ನು ಕಲಾ ಚಿತ್ರಮಂದಿರದ ಮಾದರಿಯಲ್ಲಿ ಪ್ರಾರಂಭಿಸುವ ಜವಾಬ್ದಾರಿಯೂ ಅವರ ಮೇಲಿತ್ತು. ಡೆಬೋನಿಯರ್(ಮಾಸಿಕ), ಮಿಡ್ ಡೇ ಮತ್ತು ಸಂಡೇ ಮಿಡ್ ಡೇ(ಸಂಜೆ ಪತ್ರಿಕೆಗಳು) ನಿಂದ ಪ್ರಾರಂಭವಾದ ಧಾರ್ಕರ್ ವೃತ್ತಿ ಬದುಕು ಟೈಮ್ಸ್ ಆಫ್ ಇಂಡಿಯಾ ಸಮೂಹದ ಇಂಡಿಪೆಂಡೆಂಟ್ ಮತ್ತು ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಸೇರಿ ಹಲವೆಡೆಗಳಲ್ಲಿ ವಿಸ್ತರಿಸಿದೆ. ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಅಂಕಣಕಾರರೂ ಆಗಿದ್ದರು.
ದಿ ರೋಮ್ಯಾನ್ಸ್ ಆಫ್ ಸಾಲ್ಟ್, ಇನ್ವಿಸಿಬಲ್ ಗುಡ್ನೆಸ್: ದಿ ಸ್ಟೋರಿ ಆಫ್ ಟಾಟಾ ಪವರ್, ಐಕಾನ್ಸ್: ಮೆನ್ & ವುಮೆನ್ ಹೂ ಶೇಪ್ಡ್ ಟುಡೇಶ್ ಇಂಡಿಯಾ – ಇವು ಧಾರ್ಕರ್ ಅವರ ಕೆಲ ಅತ್ಯುತ್ತಮ ಪುಸ್ತಕಗಳಾಗಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ